

ಸಂಬರಗಿ: ಶಾಸಕ ಲಕ್ಷ್ಮಣ ಸವದಿ ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಬರಪೀಡಿತ ಗ್ರಾಮಗಳಲ್ಲಿ ನೀರು ಒದಗಿಸಿದ್ದಾರೆ. ಅಭಿವೃದ್ಧಿಗಾಗಿ ಮುಚ್ಚಿದ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಭುಟಾಳಿ ಶುಗರ್ಸ್ ಅಧ್ಯಕ್ಷ ಸದಾಶಿವ ಭುಟಾಳೆ ಹೇಳಿದರು.
ಸಮೀಪದ ಜಂಬಗಿ ಗ್ರಾಮದಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಲ ವಿತರಣೆ ಮತ್ತು ಕಾಲುವೆ ನೀರಿಗೆ ಪೂಜೆ ಸಲ್ಲಿಸಿ ಮಾತನಾಡಿ, ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದರು. ಶಾಸಕ ರಾಜು ಕಾಗೆ ಮಾತನಾಡಿದರು. ಸುರೇಶ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಜಿಪಂ ಮಾಜಿ ಸದ್ಯಸ್ಯ ವಿನಾಯಕ ಬಾಗಡಿ, ರವಿ ವಾಘಮಾರೆ, ಸಂಘದ ಅಧ್ಯಕ್ಷ ರಾಜೇಂದ್ರ ಪಾಟೀಲ, ಯಶವಂತ ಪಾಟೀಲ, ವಿಲಾಸ ಟೋನ, ಅಣ್ಣಪ್ಪ ಮಿಸಾಳ, ತುಕಾರಾಮ ಶೆಳಕೆ, ಜೈ ಹನುಮಾನ ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಕೋರೆ, ಗೋಪಾಲ ಅವಾಳೆೆ, ರಾಮನಗೌಡ ಪಾಟೀಲ, ಬಾಬು ಮೆಂಡಿಗಿರಿ, ಡಾ. ಶ್ರೀಕಾಂತ ಕಣ್ಣೂರು, ಪೋಪಟ ಜಾಧವ, ಸುನೀಲ ಪಾಟೀಲ, ಬಂಡು ಜಾಧವ ಇತರರಿದ್ದರು.