ಸವದಿ ಬೆಂಬಲಿತರ ಸಂಭ್ರಮ

19..4
ಕೊಕಟನೂರ ಗ್ರಾಮದ ಪಿಕೆಪಿಎಸ್ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ಸದಸ್ಯರು ವಿಜಯೋತ್ಸವ ಆಚರಿಸಿದರು. ಶಾಮರಾವ ಪೂಜಾರಿ, ಶಂಕರ ಹಿರೇಕುರಬರ, ವಿಶಾಲ ದೇಸಾಯಿ, ಸುಭಾಷ ಸೋನಕರ ಇತರರಿದ್ದರು.
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಪೆನಲ್‌ನ 12 ಸದಸ್ಯರು ಆಯ್ಕೆಯಾಗಿದ್ದಾರೆ.


ಸಾಲಗಾರ ಸಾಮಾನ್ಯ ಮೀಸಲು ಕ್ಷೇತ್ರದಿಂದ ಸುರೇಶ ಪಾಟಣಕರ, ಅಣ್ಣಪ್ಪ ಖೋತ, ಈಶ್ವರ ಜಗದಾಳ, ವೀರೇಂದ್ರ ಹಳಕಿ, ಸಂಜು ಜಾಧವ, ಮಹಿಳಾ ಮೀಸಲು ಕ್ಷೇತ್ರದಿಂದ ದಾನವ್ವ ಕುಮಟಗಿ, ಸಾಯಂವ್ವ ಸವದಿ, ಹಿಂದುಳಿದ ಅ ವರ್ಗದಿಂದ ಭರಮಾ ಬಣಜ, ಬ ವರ್ಗದಿಂದ ಸಂಗಪ್ಪ ಅಡಹಳ್ಳಿ, ಎಸ್ಸಿ ಕ್ಷೇತ್ರದಿಂದ ಶಿವಲಿಂಗ ಧಡಕೆ, ಎಸ್ಟಿ ಕ್ಷೇತ್ರದಿಂದ ರಾಮು ಕರೆಣ್ಣವರ ಹಾಗೂ ಬಿನ್ ಸಾಲಗಾರ ಕ್ಷೇತ್ರದಿಂದ ಸುಮೀತ ಪತ್ತಾರ ಆಯ್ಕೆಯಾಗಿದ್ದಾರೆ.


ಚುನಾವಣಾಕಾರಿಯಾಗಿ ಸಚಿನ ಚಿನಗುಂಡಿ ಕಾರ್ಯನಿರ್ವಹಿಸಿದರು. ವಿಜೇತರು ಮತ್ತವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ಮುಖಂಡರಾದ ವಿಶಾಲ ದೇಸಾಯಿ, ಅರ್ಜುನ ಪೂಜಾರಿ, ಮಹಾದೇವ ಮಗರ, ಸುಭಾಷ ಸೋನಕರ, ಅನಿಲ ಮುಳಿಕ, ಸದಾಶಿವ ಹುಟಿ, ಶಂಕರ ಹಿರೇಕುರಬರ, ಅಪ್ಪಾಸಾಬ ಸನದಿ, ಸುರೇಶ ಪೂಜಾರಿ, ರಾಜು ಸವದಿ, ಹಿರಾಚಂದ್ರ ಹಳಕಿ, ಮಹಾವೀರ ವೀರಗೌಡ, ಮಲ್ಲಪ್ಪ ಪರಾಂಡೆ, ಯಶವಂತ ಪೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net