ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ರೈಲು ಸಂಪರ್ಕ

200
Published on

ಬೆಳಗಾವಿ: ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ನೂತನ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯ ಆರಂಭಿಸಿ ವರದಿ ತಯಾರಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸಂಸದ ಜಗದೀಶ ಶೆಟ್ಟರ ಸೂಚಿಸಿದರು.

ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಇಲಾಖೆ ಸಭಾಂಗಣದಲ್ಲಿ ಮಂಗಳವಾರ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ಭಾಗಗಳಿಂದ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ರೈಲ್ವೆ ಮಾರ್ಗ ನಿರ್ಮಾಣವಾಗಬೇಕು. ಇದಕ್ಕೆ ಅನುಗುಣವಾಗಿ ಸಮೀಕ್ಷೆ ಕಾರ್ಯ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು ಎಂದರು.

ಬೆಳಗಾವಿ -ಕಿತ್ತೂರು -ಧಾರವಾಡ ನೂತನ ರೈಲ್ವೆ ಮಾರ್ಗದ ಕುರಿತು ಪ್ರಸ್ತುತ ಯೋಜನೆಯ ಪ್ರಗತಿ ಕುರಿತು ವರದಿ ಪಡೆದು. ಶೀಘ್ರದಲ್ಲಿ ಕಾಮಗಾರಿಯನ್ನು ಆರಂಭಿಸಬೇಕು.ಬೆಂಗಳೂರು - ಧಾರವಾಡ ನಡುವೆ ಸಂಚರಿಸುತ್ತಿರುವ ಒಂದೇ ಭಾರತ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಬೇಕು. ಇದಕ್ಕೆ ಅಡ್ಡಿಯಾಗಿರುವ ತಾಂತ್ರೀಕ ಸಮಸ್ಯೆಗಳನ್ನು ಪರಿಹರಿಸಬೇಕು.ಪುಣೆ- ಬೆಳಗಾವಿ- ಧಾರವಾಡ ಒಂದೇ ಭಾರತ ರೈಲಿನ ಮಾದರಿಯಲ್ಲಿ ಬೆಂಗಳೂರು ಧಾರವಾಡ ಒಂದೇ ಭಾರತರಲ್ಲನ್ನು ಬೆಳಗಾವಿವರೆಗೆ ರೈಲು ಸಂಚರಿಸಬೇಕು ಎಂದು ತಿಳಿಸಿದರು.

ಬೆಳಗಾವಿಯಿಂದ ಸಾವಂತವಾಡಿಯ ವರೆಗೂ ಸಹ ನೂತನ ಕೊಂಕಣ ರೈಲ್ವೆ ಸಂಪರ್ಕ, ಹಾಗೂ ಬೆಳಗಾವಿ -ಕೊಲ್ಲಾಪುರ ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಕೆಲಸ ಆರಂಭವಾಗಬೇಕು. ಬೆಳಗಾವಿ - ಮಿರಜ - ಬೆಳಗಾವಿ ನಡುವೆ ಪ್ಯಾಸೆಂಜರ್ ರೈಲು ಸೇವೆಯು ಈ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು ಈ ಸೇವೆಯನ್ನು ಇನ್ನು ಹೆಚ್ಚಿನ ಕಾಲದವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಮುಂದುವರಿಸುವಂತೆ ಸೂಚಿಸಿದರು.

ಹುಬ್ಬಳ್ಳಿಯಿಂದ ಕೊಚ್ಚಿವೆಲ್ಲಿ ವರೆಗೆ ಈಗಾಗಲೇ ಸಂಚರಿಸುತ್ತಿರುವ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಬೇಕು.ಮೈಸೂರ - ಅಜ್ಮೀರ ಎಕ್ಸ್ಪ್ರೆಸ್‌ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವಂತೆಯು ಮತ್ತು ಬೆಳಗಾವಿ -ಪಂಡರಾಪುರ, ಹುಬ್ಬಳ್ಳಿ-ಬೆಳಗಾವಿ -ಶಿರಡಿ -ಕೊಪರ್ಗಾವ್, ಬೆಳಗಾವಿ - ಜೋಧ್ಪುರ್, ಬೆಳಗಾವಿ -ಮುಂಬೈ, ನೂತನ ರೈಲು ಸಂಪರ್ಕ ಕಲ್ಪಿಸಬೇಕು.ಬೆಳಗಾವಿ ಹತ್ತಿರದ ದೇಸೂರು ರೈಲ್ವೆ ನಿಲ್ದಾಣದಲ್ಲಿ ನಾಲ್ಕು ರೈಲ್ವೆ ಫಿಟ್ ಲೈನ ನಿರ್ಮಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net