ಸವದತ್ತಿ ತಾಲೂಕಿಗೆ 32 ಸಾವಿರ ಕ್ವಿಂಟಾಲ್ ಅಕ್ಕಿ ಬಿಡುಗಡೆ

23Tallur1
ಆಲದಕಟ್ಟಿ ಕೆಎಂ ಗ್ರಾಮದಲ್ಲಿ ನೂತನವಾಗಿ ನ್ಯಾಯಬೆಲೆ ಅಂಗಡಿಯನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು. ಬಸಯ್ಯ ಹಿರೇಮಠ, ಎಸ್.ಎಂ.ಹೊನ್ಯಾಳ, ಎಸ್.ಎಸ್.ಮುಗಳಿ, ನಾಗಪ್ಪ ಚವಡಪ್ಪನ್ನವರ ಇದ್ದರು.
Published on

ತಲ್ಲೂರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ ಯೋಜನೆಯಡಿ ಸವದತ್ತಿ ತಾಲೂಕಿಗೆ 32,466 ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಸಮೀಪದ ಆಲದಕಟ್ಟಿ ಕೆಎಂ ಗ್ರಾಮದಲ್ಲಿ ಇತ್ತೀಚೆಗೆ ಶಿವಯೋಗೀಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನ್ಯಾಯಬೆಲೆ ಅಂಗಡಿ ಉದ್ಘಾಟನೆ ಹಾಗೂ ಆಜಾದಿ-ಕಾ-ಅಮೃತ್ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನ್ಯಾಯಬೆಲೆ ಅಂಗಡಿಕಾರರು ಸಾರ್ವಜನಿಕರಿಂದ ಯಾವುದೇ ತಕರಾರು ಬಾರದಂತೆ ಶಿಸ್ತುಬದ್ಧವಾಗಿ ರೇಷನ್ ವಿತರಣೆ ಮಾಡಬೇಕು ಎಂದು ಸೂಚಿಸಿದರು.ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಿಸಬೇಕೆಂದು ಗ್ರಾಮಸ್ಥರ ಪರವಾಗಿ ಬೇಮುಲ್ ನಿರ್ದೇಶಕ ಎಸ್.ಎಸ್. ಮುಗಳಿ ಮನವಿ ಮಾಡಿದರು. ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಪಿಕೆಪಿಎಸ್ ಅಧ್ಯಕ್ಷ ಎಸ್.ಎಂ.ಹೊನ್ಯಾಳ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ನಾಗಪ್ಪ ಚವಡಪ್ಪನ್ನವರ, ಗ್ರಾಪಂ ಅಧ್ಯಕ್ಷೆ ಜಾನವ್ವ ಆಡಿನ, ಉಪಾಧ್ಯಕ್ಷ ಫಕೀರಪ್ಪ ಸಣ್ಣಗೌಡ್ರ, ಸದಸ್ಯ ಅಶೋಕ ಚಿಕ್ಕೊಪ್ಪ, ಪ್ರೇಮಾ ಡಮ್ಮಣಗಿ, ಪ್ರಭಾವತಿ ಗುರುನಗೌಡರ, ಶೋಭಾ ಮಾದರ, ಸುರೇಶ ಮುಗಳಿ, ಆಹಾರ ಇಲಾಖೆ ಶಿರಸ್ತೆದಾರ ಎಂ.ಎನ್.ಉಸ್ತಾದ್, ಆಹಾರ ನಿರೀಕ್ಷಕ ಎ.ಎಲ್.ರಾವಳ, ಬಸವಣ್ಣೆಪ್ಪ ವಂಟಮೂರಿ, ಶಿವಲೀಲಾ ಸಣ್ಣಗೌಡರ, ನಾಗಪ್ಪ ಹಿತ್ತಲಮನಿ, ಬಸವರಾಜ ಯರಗಟ್ಟಿ, ಮಹಾದೇವ ಗುರನಗೌಡ್ರ, ಅವಪ್ಪ ರಾಯನ್ನವರ, ಬಸವನಗೌಡ ಸಣ್ಣಗೌಡ್ರ, ರಾಯಪ್ಪ ರಾಯನ್ನವರ, ಮಹೇಶ ಚೌಡಪ್ಪನ್ನವರ, ಬಿ.ಎಸ್. ಹಳೆಮನಿ, ಶಿವಮೂಗಿ ಹಳೇಮನಿ, ಮಹಾದೇವಪ್ಪ ಗುರನಗೌಡ್ರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net