ಸಲಗರ ಬಸವಂತಪುರ ಗ್ರಾಪಂ ಅವ್ಯವಹಾರ

oppo_2
oppo_2
Published on

ಕಲಬುರಗಿ: ಚಿಂಚೋಳಿ ತಾಲೂಕಿನ ಸಲಗರ ಬಸವಂತಪುರ ಗ್ರಾಮ ಪಂಚಾಯಿತಿಯಲ್ಲಿ ನಿಯಮ ಬಾಹಿರವಾಗಿ ಗ್ರೇಡ್​ & ಕರ‍್ಯರ‍್ಶಿಗೆ ಅಧಿಕಾರ ನೀಡಿ, ನಿರಂತರವಾಗಿ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಗ್ರಾಪಂ ಸದಸ್ಯ ಓಂನಾಥ ಚವ್ಹಾಣ್​ ಆರೋಪಿಸಿದ್ದಾರೆ.

ಗ್ರಾಪಂನಲ್ಲಿ ೧೮ ಸದಸ್ಯರಿದ್ದು, ಐದು ರ‍್ಷ ಪರ‍್ಣವಾಗುತ್ತ ಬಂದಿದ್ದು, ಸರಣಿ ಅವ್ಯವಹಾರ ಮಾಡಿದ್ದಾರೆ. ಜನರಲ್​ ಮೀಟಿಂಗ್​ ಕರೆಯುತ್ತಿಲ್ಲ. ಕೋರಂ ಇರದಿದ್ದರೂ ಮನೆಗೆ ಹೋಗಿ ಸಹಿ ಮಾಡಿಸಿ, ಅವ್ಯವಹಾರ ಎಸಗುತ್ತಿದ್ದಾರೆ. ಉದ್ದೇಶಪರ‍್ವಕವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಲ್ಲ. ಮಹಿಳಾ ಸದಸ್ಯರಿದ್ದು, ಪತಿಯಂದಿರು ಬೋಗಸ್​ ಸಹಿ ಮಾಡಿಸುತ್ತಾರೆ. ಮನೆ ಮಂಜೂರು ಮಾಡಲು ಎಂಟು ಸಾವಿರ ರೂ. ಪಡೆಯುತ್ತಿದ್ದಾರೆ. ಗ್ರಾಪಂನಲ್ಲಿ ಮಾಡಿದ ರ‍್ಚು, ವೆಚ್ಚದ ಮಾಹಿತಿ ಸದಸ್ಯರು ಕೇಳಿದರೂ ನೀಡುತ್ತಿಲ್ಲ. ೧೫ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರವಾಗಿದ್ದು, ತನಿಖೆ ನಡೆಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಸಲಗರ ಬಸವಂತಪುರ ಗ್ರಾಪಂನಲ್ಲಿ ಕಾನೂನು ಬಾಹಿರ ಪ್ರಭಾರ ಇಲ್ಲದೇ ಚೆಕ್​ ಪೇಮೆಂಟ್​ ಮಾಡುತ್ತಿದ್ದಾರೆ. ಸಾಮಾನ್ಯ ಸಭೆ ಮಾಡದೆ ಕ್ರಿಯಾ ಯೋಜನೆ ಮಾಡಿದ್ದಾರೆ. ಸದಸ್ಯರ ಗಮನಕ್ಕೆ ಇಲ್ಲದೆ ಕಾಮಗಾರಿ ತನಿಖೆ ನಡೆಸುತ್ತಾರೆ. ಮನೆ ಜಿಪಿಎಸ್​ ಮಾಡಲು ಸಾವಿರ ರೂ. ಪಡೆಯುತ್ತಿದ್ದಾರೆ. ಇದರಲ್ಲಿ ಗ್ರಾಪಂ ಗ್ರೆಡ್​&೨ ಕರ‍್ಯರ‍್ಶಿ, ತಾಪಂ ಇಒ ಸೇರಿ ಎಲ್ಲ ಹಂತದ ಅಧಿಕಾರಿಗಳು ಭಾಗಿಯಿದ್ದು, ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net