ಸರ್ವೇ ಕಾರ್ಯಕ್ಕೆ ಶೀಘ್ರ ಟೆಂಡರ್

15 hunasagi 01
Published on

ಹುಣಸಗಿ: ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗದ ಸಮೀಕ್ಷೆಗೆ ಇಲಾಖೆ ಆದೇಶ ಹೊರಡಿಸಿದ್ದು, ಸರ್ವೇ ಕಾರ್ಯಕ್ಕೆ ಶೀಘ್ರ ಟೆಂಡರ್ ಹೊರಡಿಸಲಾಗುವುದು ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ್ ಹೇಳಿದರು.

ಹುಣಸಗಿ ರೈಲು ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ದಂಡಿನ್ ನೇತೃತ್ವದ ನಿಯೋಗ ಮಂಗಳವಾರ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾದಗಿರಿ, ಹುಣಸಗಿ ಮತ್ತು ಆಲಮಟ್ಟಿ ರೈಲು ಮಾರ್ಗದ ಸರ್ವೇ ಅಂತಿಮಗೊಳಿಸಿ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಮಾರ್ಗ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ಹುಣಸಗಿ ರೈಲು ಹೋರಾಟ ಸಮಿತಿ ಚಂದ್ರಶೇಖರ ದಂಡಿನ್, ಶರಣಗೌಡ ಪಾಟೀಲ್ ನೇತೃತ್ವದಲ್ಲಿ ಕೆಲ ತಿಂಗಳಗಳ ಹಿಂದೆ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ರೈಲ್ವೆ ಹಿರಿಯ ಅಧಿಕಾರಿಗಳನ್ನು ಭೇಟಿ ಮನವಿ ಸಲ್ಲಿಸಲಾಗಿತ್ತು. ನಂತರ ಸಚಿವ ವಿ.ಸೋಮಣ್ಣ ಅವರ ಸಹಕಾರದಿಂದ ನಮ್ಮ ಮನವಿ ಮೇರೆಗೆ ಕೇಂದ್ರ ರೈಲ್ವೆ ಇಲಾಖೆ ಅಂತಿಮ ಸರ್ವೇಗೆ ೪ ಕೋಟಿ ರೂ. ಮಂಜೂರು ಮಾಡಿದೆ. ಸರ್ವೇಗಾಗಿ ಶೀಘ್ರ ಟೆಂಡರ್ ಕರೆಯುವಂತೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಹೇಳಿದರು.

ರೈಲು ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ದಂಡಿನ್, ಶರಣಗೌಡ ಪಾಟೀಲ್, ತಾಳಿಕೋಟೆಯ ಜಾಲವಾದಿ, ಚನ್ನಯ್ಯಸ್ವಾಮಿ ಹಿರೇಮಠ, ಮಹಾಂತೇಶ ಮಲಗಲದಿನ್ನಿ, ಅಮರೇಶ ವೈಲಿ, ಚನ್ನಕುಮಾರ ದಿಂಡವಾರ, ಮಹಾಂತೇಶ ಮುರಾಳ್, ರಾಜಕುಮಾರ ಬಿರಾದಾರ, ನಾಗರಾಜ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net