ಸರ್ವಾಧ್ಯಕ್ಷರಾಗಿ ಈಶ್ವರ ಸಂಪಗಾವಿ ಆಯ್ಕೆ

19-33
ಖಾನಾಪುರ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಈಶ್ವರ ಸಂಪಗಾವಿ ಅವರನ್ನು ಆಹ್ವಾನಿಸಿ, ಸನ್ಮಾನಿಸಲಾಯಿತು. ವಿಜಯ ಬಡಿಗೇರ, ಬಸವಪ್ರಭು ಹಿರೇಮಠ, ಡಾ.ಜಿ.ಎನ್.ಗೋಕಾವಿ, ರವಿ ಕಾಡಗಿ ಇತರರಿದ್ದರು.
Published on

ಕಕ್ಕೇರಿ, ಬೆಳಗಾವಿ: ಖಾನಾಪುರದಲ್ಲಿ ಡಿ.30ರಂದು ಜರುಗುವ ತಾಲೂಕು 8ನೇ ಸಾಹಿತ್ಯ ಸಮ್ಮೇಳನದ ಗೌರವ ಸರ್ವಾಧ್ಯಕ್ಷರನ್ನಾಗಿ ಈಶ್ವರ ಸಂಪಗಾವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಿಕಟಪೂರ್ವ ಅಧ್ಯಕ್ಷ ವಿಜಯ ಬಡಿಗೇರ ತಿಳಿಸಿದರು. ಗ್ರಾಮದ ಸಂಪಗಾವಿ ಅವರ ನಿವಾಸಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಶುಕ್ರವಾರ ಭೇಟಿ ನೀಡಿ, ಅವರನ್ನು ಆಹ್ವಾನಿಸಿ, ಸನ್ಮಾನಿಸಿದರು. ನಿಕಟಪೂರ್ವ ಅಧ್ಯಕ್ಷ ವಿಜಯ ಬಡಿಗೇರ ಮಾತನಾಡಿ, ಹಲವಾರು ಕವನ, ಸಾಹಿತ್ಯ, ಚುಟುಕು, ಭಾವಗೀತೆಗಳನ್ನು ರಚಿಸಿದ ಇವರು ಎಲ್ಲ ಪ್ರಕಾರದ ಸಾಹಿತ್ಯ ಸಮರ್ಥವಾಗಿ ಬರೆಯಬಲ್ಲರು ಎಂದರು. ಕಸಾಪ ಅಧ್ಯಕ್ಷ ಬಸವಪ್ರಭು ಹಿರೇಮಠ, ಡಾ. ಜಿ. ಎನ್. ಗೋಕಾವಿ, ರವಿ ಕಾಡಗಿ, ರೇವಣಸಿದ್ದಯ್ಯ ಹಿರೇಮಠ, ಅಪ್ಪಯ್ಯ ಕೂಡಳ್ಳಿ, ಪ್ರಭುದೇವ ಹಿರೇಮಠ, ಬಿಟ್ಟಪ್ಪ ಬನೋಶಿ, ಗ್ರಾಪಂ ಸದಸ್ಯ ರಿಯಾಜ್ ಅಹ್ಮದ್, ಪಟೇಲ್, ಸಂಬಾಜಿ ಜಾದವ, ಮಲ್ಲಪ್ಪ ಮರಬದ, ಡಾ.ಪ್ರಸನ್ನ ದೊಡ್ಡೆಬೈಲಕರ, ಕಿಶೋರ ಮಿಠಾರಿ, ಶಿಕ್ಷಕ ಮಹಾಂತೇಶ ಹಂಚಿನಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net