ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಬುನಾದಿ

PH 02
Published on

ಕರಜಗಿ: ದೇಶ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು ಎಂದು ಶ್ರೀ ಮರುಳಾರಾದ್ಯ ಶಿವಾಚಾರ್ಯರು ಹೇಳಿದರು.

ಮಾಶಾಳ ಗ್ರಾಮದಲ್ಲಿ ನಿಂಗದಳ್ಳಿ ಪರಿವಾರದಿಂದ ಭಾನುವಾರ ಹಮ್ಮಿಕೊಂಡ ಶಿP್ಷÀಕರ ದಿನಾಚರಣೆ ಮತ್ತು ಕ್ಲಸ್ಟರ್ ಮಟ್ಟದ ಸರ್ವ ಸೇವಾ ನಿರತ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಮಾನವನ ಜೀವನದ ಅಭಿವೃದ್ಧಿಗೆ ಮೂಲ ಎಂದರು.

ಮುಖ್ಯಗುರು ರಾಜು ಪಾಯದ ಮಾತನಾಡಿ, ಗುರುಗಳನ್ನು ಸದಾ ಗೌರವದಿಂದ ಕಾಣುವ ಮೂಲಕ ವಿದ್ಯಾರ್ಥಿಗಳು ಜೀವನದ ಗುರಿ ಮುಟ್ಟುವವರೆಗೆ ಶ್ರಮಿಸಬೇಕು. ಸಮಾಜದಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳನ್ನು ಸುಂದರ ಮೂರ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ಇದೆ ಎಂದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂಜಯಕುಮಾರ ಪಾಟೀಲ್, ವೈಜನಾಥ ನಿಂಗದಳ್ಳಿ, ಮಲ್ಲಿಕಾರ್ಜುನ ನಿಂಗದಳ್ಳಿ, ವಿಶ್ವನಾಥ ರೇವೂರ, ಮಲ್ಲಿಕಾರ್ಜುನ ಬಿರಾದಾರ, ರೋಹಿತದಾಸ ಚವ್ಹಾಣ್, ಪಂಚಾP್ಷÀರಿ ಪ್ಯಾಟಿ, ಚಂದು ಬಬ್ಬಣಸೂರ, ಸುರೇಶ ಆಲೆಗಾಂವ, ಶರಣಗೌಡ ಪಾಟೀಲ್, ವಿಶ್ವನಾಥ ಗೌಡಗಾಂವ, ರಾಜು ಗುಡಗುಂಟಿ, ಹರ್ಷದ ಬಸ್ತಿ, ಅಂಬಣ್ಣ ಕೌಂಟಗಿ ಇತರರಿದ್ದರು. ಎಸ್.ಎಸ್.ಫತಾಟೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net