

ಬಾಗಲಕೋಟೆ: ಬಸವೇಶ್ವರ ಅಂತರಾಷ್ಟಿ0ಯ ಪಬ್ಲಿಕ್ ಶಾಲೆಯ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾಽಕಾರಿ ಜಾನಕಿ ಕೆ.ಎಂ. ಹೇಳಿದರು.
ನಗರದ ಬಸವೇಶ್ವರ ಇಂಜಿನಿಯರಿAಗ್ ಕಾಲೇಜಿನ ನೂತನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿವಿವಿ ಸಂಘದ ಬಸವೇಶ್ವರ ಅಂತರಾಷ್ಟಿ0ಯ ಪಬ್ಲೀಕ್ ಶಾಲೆಯ (ಬೀಪ್ಸ್) ವಾರ್ಷಿಕೋತ್ಸವ ಇಫೋರಿಯಾ-೨೦೨೫ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಇದ್ದೆ ಇರುತ್ತದೆ. ಅದಕ್ಕೆ ಪ್ರೋತ್ಸಾಹ, ತರಬೇತಿ, ವೇದಿಕೆ ಕಲ್ಪಿಸುವ ಜವಾಬ್ದಾರಿ ಪಾಲಕರು, ಪೋಷಕರು, ಶಿಕ್ಷಕರ ಮೇಲೆ ಇದೆ. ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರಗೆ ಇಡಬೇಕು. ಸಾಂಸ್ಕೃತಿಕ, ಸಾಹಿತ್ಯ, ಸಂಗೀತ, ಕ್ರೀಡೆ ಜೊತೆಗೆ ನಂಟು ಬೆಳೆಸಿಕೊಳ್ಳಲು ಸೇತುವೆ ನಿರ್ಮಿಸಬೇಕು ಎಂದರು.
ಬಿವಿವಿ ಸಂಘದ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ ಮಾತನಾಡಿ, ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ನಾಗರಿಕರಾಗಬೇಕು ಎನ್ನುವುದು ಬಿವಿವಿ ಸಂಘದ ಬಯಕೆ. ಶಿಕ್ಷಕರು, ಮಕ್ಕಳಲ್ಲಿ ದೂರದೃಷ್ಟಿ ಇರಬೇಕು. ನ್ಯೂನ್ಯತೆಯಿಂದ ಕೂಡಿದ ವಿಚಾರಧಾರೆಗಳು ಬೆಳವಣಿಗೆ ಪೂರಕವಾಗಿರುವದಿಲ್ಲ ಎಂದು ತಿಳಿಸಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ, ಪ್ರಾಚಾರ್ಯ ಸಿ.ಬಿ.ಸುರೇಶ್ ಹೆಗಡೆ, ಉಪ ಪ್ರಾಚಾರ್ಯ ಮಂಗಳಗೌರಿ ಹೆಗಡೆ, ವಿದ್ಯಾರ್ಥಿ ಪ್ರತಿನಿಽಗಳಾದ ಪ್ರತಿಕ್ಷಾ ಮುಕ್ಕಣ್ಣವರ, ನಿಂಗರಾಜ ಹೀರೆ ನಿಂಗಪ್ಪನ್ನವರ ಉಪಸ್ಥಿತರಿದ್ದರು.