ಸರ್ವರಿಗೂ ಸಮಾನತೆ ಕಲ್ಪಿಸಿದೆ ಸಂವಿಧಾನ

27BTP01
ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಚಂದ್ರಮ್ಮ, ಕುಮಾರಶೆಟ್ಟಿ, ಗಣೇಶ್, ನಾಗರಾಜು, ಸುರೇಶ್, ಸಣ್ಣಸ್ವಾಮಶೆಟ್ಟಿ ಇದ್ದರು.
Published on

ಬೆಟ್ಟದಪುರ: ನಮ್ಮ ಭಾರತ ದೇಶವು ಅತ್ಯಂತ ಪವಿತ್ರವಾದ ಸಂವಿಧಾನವನ್ನು ಹೊಂದುವ ಮೂಲಕ ದೇಶದ ಜನರನ್ನು ಸಶಕ್ತಗೊಳಿಸಿದೆ ಎಂದು ಪಿಡಿಒ ಗಣೇಶ್ ತಿಳಿಸಿದರು.

ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸರ್ವರಿಗೂ ಸಮಾನತೆ ನೀಡಿ, ಮೂಲಭೂತ ಹಕ್ಕುಗಳು, ಕರ್ತವ್ಯವನ್ನು ಕೊಟ್ಟಿದೆ. ನಮ್ಮ ದೇಶಕ್ಕೆ ಸಂವಿಧಾನವೇ ದೊಡ್ಡ ಬಲವಾಗಿದೆ. ಇಂತಹ ಶ್ರೇಷ್ಠವಾದ ಸಂವಿಧಾನವನ್ನು ಬೇರೆ ಯಾವುದೇ ದೇಶದಲ್ಲಿ ಕಾಣವುದಕ್ಕೆ ಆಗುವುದಿಲ್ಲ ಎಂದರು.

ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಸದಸ್ಯ ಕುಮಾರಶೆಟ್ಟಿ, ಬಿಲ್ ಕಲೆಕ್ಟರ್ ಕುಮಾರಶೆಟ್ಟಿ, ಗ್ರಂಥಪಾಲಕ ನಾಗರಾಜು, ಮುಖಂಡರಾದ ಸುರೇಶ್, ಸಣ್ಣಸ್ವಾಮಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net