ಸರ್ವರನ್ನೂ ಒಳಗೊಳ್ಳುವ ಬಜೆಟ್

Murali
Published on

ಚಿತ್ರದುರ್ಗ: ಅನ್ನದಾತರು, ಬಡವರು, ಮಹಿಳೆಯರು, ಯುವಸಮೂಹ ದೇಶದ ಆಧಾರ ಸ್ತಂಭಗಳು. ಎಲ್ಲ ಅರ್ಹರಿಗೂ ಸರ್ಕಾರದ ಸೌಲಭ್ಯಗಳು ತಲುಪಿಸುವುದು, ರೈತರ ಆದಾಯ ಹೆಚ್ಚಿಸುವುದು, ಅಗತ್ಯ ನೆರವು ನೀಡುವುದು, ಸ್ವ-ಸಹಾಯ ಸಂಘಗಳಿಗೆ ನೆರವು, ರೈತರ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು ಕ್ರಮ, ಬೆಳೆ ಸಂರಕ್ಷಣೆಗೆ ಆದ್ಯತೆ ಸೇರಿ ಇತರ ಯೋಜನೆಗಳು ಜನಪರವಾಗಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ತಿಳಿಸಿದ್ದಾರೆ.

4 ಕೋಟಿ ರೈತರಿಗೆ ಪಿಎಂ ಫಸಲ್ ಬೀಮಾ ಯೋಜನೆ ತಲುಪಿದೆ. 1,269 ಇ-ಮಾರ್ಕೆಟ್‌ಗಳ ಮೂಲಕ ಕೋಟ್ಯಂತರ ರೈತರಿಗೆ ಅನುಕೂಲವಾಗಿದೆ. ಯಾವುದೇ ತಾರತಮ್ಯ ಇಲ್ಲದ ಸರ್ವರನ್ನೂ ಒಳ್ಳಗೊಳ್ಳುವ ಬಜೆಟ್ ಇದಾಗಿದೆ ಎನ್ನುತ್ತಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net