ಸರ್ವರನ್ನು ಪ್ರೀತಿಸುವ ಧರ್ಮ ವೀರಶೈವ ಧರ್ಮ

RPT WEB NEW 2
Published on

ರಿಪ್ಪನ್‌ಪೇಟೆ: ವೀರಶೈವ ಧರ್ಮ ಸರ್ವರನ್ನು ಪ್ರೀತಿಸುವ ವೈಶಿಷ್ಟ್ಯತೆ ಹೊಂದಿದ ಧರ್ಮವಾಗಿದೆ ಎಂದು ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಮೀಪದ ಮಸರೂರು ಗ್ರಾಮದ ಪೂಜಾರಗೊಪ್ಪದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಕ್ತರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀ ಜಗದ್ಗುರು ರೇಣುಕಾ ಭಗವತ್ಪಾದರು ಸಿದ್ಧಾಂತ ಶಿಖಾಮಣಿಯಲ್ಲಿ ಸರ್ವಧರ್ಮದವರಿಗೂ ಅನ್ವಯವಾಗುವ ದಶಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯೆ, ಕ್ಷಮ, ಜಪ, ಪೂಜೆ, ಧ್ಯಾನ ಹೀಗೆ ಬೋದಿಸಿದ್ದಾರೆ ಎಂದರು.

ಶ್ರೀಗುರು ಕರುಣಿಸಿದ ಇಷ್ಟಲಿಂಗದ ಮಹತ್ವವು ಅತಿ ಅಗಮ್ಯವಾಗಿದೆ. ಅನಿಷ್ಟವನ್ನು ಕಳೆದು ಇಷ್ಟಾರ್ಥವನ್ನು ಪೂರೈಸುವ ಶಕ್ತಿ ಇಷ್ಟಲಿಂಗದಲ್ಲಿದೆ. ಆದರೆ, ಅದು ನಿಷ್ಠೆಯಿಂದ ಪೂಜೆಮಾಡಿದರೆ ಮಾತ್ರ ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net