

ಲಿಂಗದಹಳ್ಳಿ: ವಿಶ್ವದೆಲ್ಲೆಡೆ ವಿವಿಧ ಸಮುದಾಯಗಳ ಸಮನ್ವಯದ ಕೊರತೆಯಲ್ಲೂ ಹಿಂದು, ಮುಸ್ಲಿಂ, ಕ್ರೈಸ್ತರ ಆಶ್ರಯದಲ್ಲಿ 37 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ವರ್ತೆಗುಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ಮಹಾಶಿವರಾತ್ರಿ ಕಾರ್ಯಕ್ರಮ ಸಾಮರಸ್ಯದ ಪ್ರತೀಕವಾಗಿದೆ ಎಂದು ಸಮಾಜಸೇವಕ ಗುಳ್ಳದ ಮನೆ ಗೋಪಾಲಕೃಷ್ಣ ಹೇಳಿದರು.
ವರ್ತೆಗುಂಡಿ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭಾಗದ ವಿವಿಧ ಸಮುದಾಯದವರ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜನರಲ್ಲಿ ಒಗ್ಗಟ್ಟಿನ ಭಾವ ತೋರಿಸುತ್ತದೆ ಎಂದು ಹೇಳಿದರು.
ದೇವಾಲಯ ಸಮಿತಿ ಅಧ್ಯಕ್ಷ ಈಶ್ವರನಾಯ್ಕ, ಸಮಾಜ ಸೇವಕಿ ವಾಣಿ ಶ್ರೀನಿವಾಸ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎನ್.ಜಿ. ರಮೇಶ್, ಬಗರ್ ಹುಕುಂ ಸಮಿತಿ ಸದಸ್ಯ ಮೊಹಮ್ಮದ್ ಅಕ್ಬರ್, ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್, ಪ್ರೌಢಶಾಲಾ ಶಿಕ್ಷಕ ಬಿ.ಸಿ. ಚಂದ್ರಶೇಖರ್, ಗ್ರಾಪಂ ಸದಸ್ಯರು ಇತರರಿದ್ದರು.