ಸರ್ವ ಸಮುದಾಯದ ಅಭಿವೃದ್ಧಿಗೆ ಶ್ರಮ

PH 05
Published on

ಆಳಂದ: ಕಾರ್ಯಕರ್ತರ ಪರಿಶ್ರಮ, ಸರ್ವ ಸಮುದಾಯದವರ ಸಹಕಾರದಿಂದಲೇ ಮತ್ತೊಮ್ಮೆ ಶಾಸಕನ್ನಾಗಿ ಆಯ್ಕೆಯಾಗಿದ್ದೇನೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಒಂದಿಷ್ಟು ಸಮಯ ಕೊಡಿ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

ಎ.ವಿ.ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬಂಜಾರ ಸಮಾಜದಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಚುನಾವಣೆ ವೇಳೆ ಜನತೆಗೆ ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಂಜಾರ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದು, ಪರಿಶೀಲಿಸಲಾಗುವುದು. ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಶ್ರೀ ಸುನೀಲ್ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ್ ಚಿತಲಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಗುರುಶರಣ ಪಾಟೀಲ್, ಪ್ರಮುಖರಾದ ಅಮ್ಜದ್ ಅಲಿ ಕರಜಗಿ, ಫಿರ್ದೋಸ್ ಅನ್ಸಾರಿ, ತಯ್ಯಬ್ ಅಲಿ, ಶಂಕರರಾವ ದೇಶಮುಖ, ಕನ್ನಿರಾಮ ರಾಠೋಡ್, ಮಜರ್ ಹುಸೇನ್, ಆರೀಫ್ ಅಲಿ ಲಡಂಕೆ, ಮೋಹನಗೌಡ ಪಾಟೀಲ್, ಬಾಬುರಾವ ಗೊಬ್ಬೂರ, ಅನೀಲ್ ರಾಠೋಡ್, ಮಲ್ಲಪ್ಪ ಹತ್ತರಕಿ, ಕಿಶನ್ ರಾಠೋಡ್, ಸುಲ್ತಾನಪ್ಪ ವಾಗ್ದರಗಿ ಇತರರಿದ್ದರು.

ವಿಜಯಕುಮಾರ ರಾಠೋಡ್ ನಿರೂಪಣೆ ಮಾಡಿದರು. ಸುಭಾಷ ಪೋಜಿ ಸ್ವಾಗತಿಸಿದರು. ರಾಜು ರಾಠೋಡ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net