ಸರ್ದಾರ್ ವಲ್ಲಭಭಾಯಿ ಆದರ್ಶಗಳೆಡೆ ಮೂಡಿಸ ಬೇಕಿದೆ ಜಾಗೃತಿ

CTD NEWS BJP
Published on

ಚಿತ್ರದುರ್ಗ: ದೇಶದ ಏಕತೆಗಾಗಿ ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೇಶಭಕ್ತಿ,ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳ ಬೇಕೆಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್ ಹೇಳಿದರು. ಪಟೇಲ್ ಜನ್ಮ ದಿನದ ಅಂಗವಾಗಿ ನಗರದಲ್ಲಿ ಮಂಗಳವಾರ

ಬಿಜೆಪಿಯಿಂದ ಏರ್ಪಡಿಸಿದ್ದ ಏಕತೆಗಾಗಿ ಓಟ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 563 ಸಂಸ್ಥಾನಗಳನ್ನು ಒಗ್ಗೂಡಿಸಿ ರಾಷ್ಟ್ರದ ಏಕತೆ, ಸಾರ್ವಭೌಮತೆಯನ್ನು ಪಟೇಲ್ ಮೆರೆದಿದ್ದಾರೆ.

ಹೈದರಾಬಾದ್ ವಿಮೋಚನೆ ಕಷ್ಟದ ದಿನಗಳಲ್ಲಿ ಸೈನ್ಯ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಅಖಂಡತೆ ಎತ್ತಿಹಿಡಿದ ಹೆಗ್ಗಳಿಕೆ,ದಿಟ್ಟ ವ್ಯಕ್ತಿ ಪಟೇಲ್ ಅವರದ್ದಾಗಿದೆ. ಪ್ರಧಾನ ಮಂತ್ರಿ ಅವಕಾಶವನ್ನು ತ್ಯಾಗ ಮಾಡಿದ್ದ ಅವರ ಆಚಾರ-ವಿಚಾರಗಳೆಡೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯದಿಂದ ಒನಕೆ ಓಬವ್ವ ವೃತ್ತದವರೆಗೆ ನಡೆದ ಏಕತೆ ನಡೆದ ಓಟದಲ್ಲಿ ಸುರೇಶ್ ಸಿದ್ದಾಪುರ,ಸಂ ಪತ್‌ಕುಮಾರ್,ನವೀನ್‌ಚಾಲುಕ್ಯ,ನಾಗರಾಜ್‌ಬೇದ್ರೆ,ಮಲ್ಲಿಕಾರ್ಜುನ್,ಲೋಕೇಶ್,ಕಿರಣ್ ಮತ್ತಿತರ ಪಕ್ಷದ ಪ್ರಮುಖರು,ಕಾರ‌್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net