ಸರ್ಜಿಕಲ್ ಚೇರ್‌ಗೆ ಬೇಡಿಕೆಯಿಟ್ಟ ದರ್ಶನ್

Published on

ಬಳ್ಳಾರಿ : ನಟ ದರ್ಶನ್‌ಗೆ ಬೆನ್ನಲುಬು ಸಮಸ್ಯೆಯಿದ್ದು, ಶೌಚಕ್ಕಾಗಿ ಸರ್ಜಿಕಲ್ ಚೇರ್ ನೀಡುವಂತೆ ಬೇಡಿಯಿಟ್ಟದ್ದಾರೆ ಎಂದು ಕಾರಾಗೃಹ ಇಲಾಖೆಯ ಉತ್ತರ ವಲಯ ಉಪ ಮಹಾನಿರೀಕ್ಷಕ ಟಿ.ಪಿ. ಶೇಷ ತಿಳಿಸಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ನ ದರ್ಶನ್ ಸೆಲ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ದರ್ಶನ್‌ನನ್ನ ಆಹಾರ ಸೇವನೆ ತೆಗೆದುಕೊಳ್ಳುವ ಬಗ್ಗೆ ವಿಚಾರಿಸಲಾಯಿತು. ಜೈಲಿನಲ್ಲಿ ಇಂಡಿಯನ್ ಶೌಚಾಲಯವಿದೆ. ಬೆನ್ನಲುಬು ಸಮಸ್ಯೆಯಿದ್ದು, ಶೌಚಕ್ಕೆ ಕಷ್ಟವಾಗುತ್ತದೆ ಎಂದು ತಿಳಿಸಿದರು. ವೆಸ್ಟ್ರನ್ ಕಮೋಡ್ ಅಥವಾ ಸರ್ಜಿಕಲ್ ಚೇರ್ ಕೊಡಿ ಎಂದು ಮನವಿ ಮಾಡಿದ್ದಾರೆ. ವೈದ್ಯರು ಬೆನ್ನಲುಬು ಸಮಸ್ಯೆ ಬಗ್ಗೆ ಖಚಿತಪಡಿಸಿದ ಬಳಿಕ ಸರ್ಜಿಕಲ್ ಚೇರ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಜೈಲಿನಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿತ್ತು. ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗಿದೆ. ಅಧಿಕಾರಿಗಳು ಸೂಚನೆಯನ್ನು ಸಮರ್ಪಕವಾಗಿ ಪಾಲಿಸುತ್ತಿದ್ದಾರೆ ಎಂದರು. ಕುಟುಂಬಸ್ಥರು ಮತ್ತು ಅವರ ವಕೀಲರನ್ನು ಹೊರತುಪಡಿಸಿ ಬೇರೆಯಾರಿಗೂ ದರ್ಶನ್ ವೀಕ್ಷಣೆಗೆ ಅವಕಾಶವಿಲ್ಲ . ಜೈಲು ಸಿಬ್ಬಂದಿ ಮೇಲೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ ಎಂದರು. ಜೈಲಿನಲ್ಲಿ ಮೊಬೈಲ್ ಜಾಮಾರ್ ಇಲ್ಲ, ಅತ್ಯಾಧುನಿಕ ಜಾಮರ್ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ದರ್ಶನ್ ಟಿ.ವಿ. ಕೇಳಿದರೆ ನೀಡಲಾಗುವುದು. ಭದ್ರತೆ ನೀಡುವ ಇಬ್ಬರು ಸಿಬ್ಬಂದಿಗೆ ಎರಡು ಬಾಡಿ ವಾರ್ನ್ ಕ್ಯಾಮೆರಾ ಹಾಗೂ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಮೂರು ಸಿಸಿ ಟಿವಿ ಅಳವಡಿಸಲಾಗಿದೆ. ಭದ್ರತೆ ಒದಗಿಸುವ ಜೈಲು ಸಿಬ್ಬಂದಿಗೆ ಮೊಬೈಲ್ ನಿಷೇಧ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net