ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

6-77
ನೇಸರಗಿ ಸಮೀಪದ ಹಣಬರಟ್ಟಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಮಹಾಂತೇಶ ದೊಡಗೌಡರ ಶನಿವಾರ ಭೂಮಿಪೂಜೆ ನೆರವೇರಿಸಿದರು. ಬಿ.ಎಫ್.ಕೊಳದೂರ, ಎಸ್.ಎಂ.ಪಾಟೀಲ, ಪ್ರಕಾಶ ಬಡವಣ್ಣವರ, ಪಿಡಿಒ ಶಿವಾನಂದ ಕಲ್ಲೂರ ಇತರರು ಇದ್ದರು.
Published on

ನೇಸರಗಿ, ಬೆಳಗಾವಿ: ಗ್ರಾಮೀಣ ಭಾಗದ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಕಿತ್ತೂರು ಮತಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಅನುಷ್ಠಾನಗೊಳಿಸಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ಸಮೀಪದ ಹಣಬರಟ್ಟಿ ಗ್ರಾಮದಲ್ಲಿ ಶನಿವಾರ ನೀರಾವರಿ ಇಲಾಖೆಯಿಂದ ಹಣಬರಹಟ್ಟಿ ಗ್ರಾಮಕ್ಕೆ 35 ಲಕ್ಷ ರೂ. ಹಾಗೂ ಹೊಸಕೋಟಿ ಗ್ರಾಮಕ್ಕೆ 25 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಜನರಿಗೆ ಮೂಲ ಸೌಕರ್ಯ ಒದಗಿಸುವುದರಿಂದ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಲಿದೆ. ರಾಜ್ಯ ಸರ್ಕಾರ ಜನರ ಕಲ್ಯಾಣಕ್ಕಾಗಿ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಬಿ.ಎಫ್.ಕೊಳದೂರ, ಎಸ್.ಎಂ.ಪಾಟೀಲ, ಬೈಲಹೊಂಗಲ ನೀರಾವರಿ ಇಲಾಖೆ ಎಇಇ ಆರ್. ಐ.ಎಲಿಗಾರ, ಗ್ರಾಪಂ ಅಧ್ಯಕ್ಷ ಪ್ರಕಾಶ ಬಡವಣ್ಣವರ, ಪಿಡಿಒ ಶಿವಾನಂದ ಕಲ್ಲೂರ, ಸಲೀಂಶಹಾ ನದಾಫ್, ವಿಠ್ಠಲ ಬಿರಗಡ್ಡಿ, ಶ್ರೀಧರ ಯರಡಾಲ, ದಯಾನಂದ ಬಡವಣ್ಣವರ, ಗುತ್ತಿಗೆದಾರ ಸತೀಶ ಪಾಟೀಲ, ಸಂತೋಷ ಗೋವಿ, ಲಕ್ಷ್ಮೀ ತಳವಾರ, ಲಕ್ಷ್ಮೀ ಬಿಲ್, ಸುನಂದಾ ಉಳವಿ, ಲಕ್ಷ್ಮಣ ಮಾರಿಹಾಳ, ಲಕ್ಷ್ಮಣ ದಂಡಾಪುರ, ಪ್ರೌಢಶಾಲೆ ಮುಖ್ಯ ಶಿಕ್ಷಕ ಅರ್ಜುನ ಕಡೆಟ್ಟಿ, ಚಂದ್ರಕಾಂತ ಮುತ್ತಲಮರಿ, ಆನಂದ ಖೋದಾನಪುರ, ರಾಯನಗೌಡ ಜಕ್ಕಣ್ಣವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net