

ವಾಜಿ ಸಚಿವ ದಿವಂಗತ ವರದೇಗೌಡರು ನಮ್ಮ ಊರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರು. ಗ್ರಾಮದಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಗ್ರಾಮದ ಅಭಿವೃದ್ಧಿಗೆ ಹಲವು ಭರವಸೆಗಳನ್ನು ಜನಪ್ರತಿನಿಧಿಗಳು ನೀಡಿದ್ದಾರೆ. ಆದರೆ, ಯಾವುದೂ ಈಡೇರಿಲ್ಲ. ಶಾಸಕರಾದ ಎಚ್.ಡಿ. ಕುವಾರಸ್ವಾಮಿ ಬಗ್ಗೆ ಭರವಸೆ ಇಟ್ಟುಕೊಂಡಿದ್ದೇವೆ. ರಾಮಣ್ಣ, ಗ್ರಾಮದ ಹಿರಿಯ ***
ಗ್ರಾಮದ ಮಕ್ಕಳು ಅಂಗನವಾಡಿ ಹಾಗೂ ಶಾಲೆಗೆ ತೆರಳಲು 2-3 ಕಿ.ಮೀ. ಹೋಗಬೇಕು. ನಿರ್ಜನ ಹಾಗೂ ಅವ್ಯವಸ್ಥೆಯ ದಾರಿಯಲ್ಲಿ ತೆರಳಿ ವಿದ್ಯಾಭ್ಯಾಸ ವಾಡಬೇಕಾದ ಸ್ಥಿತಿ ಇದೆ. ಓದಲು ನಗರಕ್ಕೆ ಹೋಗುವುದಂತೂ ಸವಾಲಿನ ಕೆಲಸ. ಇದರಿಂದಾಗಿಯೇ ಹಲವರು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಂಗ ವಾಡುತ್ತಿದ್ದೇನೆ. ಪ್ರತಿನಿತ್ಯ ತಂದೆಯ ಬೈಕ್ ತೆಗೆದುಕೊಂಡು ಕಾಲೇಜಿಗೆ ಹೋಗಿ ಬರುತ್ತೇನೆ. ಗ್ರಾಮಕ್ಕೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕು. ಸರಸ್ವತಿ, ಬಿಕಾಂ ವಿದ್ಯಾರ್ಥಿನಿ ***
ರೇಷ್ಮೆ, ವಾವು, ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆ ನಡೆಸುತ್ತ ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ. ಪ್ರತಿನಿತ್ಯ 2 ಕ್ಯಾನ್ ಹಾಲು ಉತ್ಪಾದನೆಯಾಗುತ್ತದೆ. ಇದನ್ನು ಪಕ್ಕದ ಗ್ರಾಮದ ಡೇರಿಗೆ ತೆಗೆದುಕೊಂಡು ಹೋಗಬೇಕು. ಕೃಷಿ ಉತ್ಪನ್ನಗಳನ್ನು ವಾರಾಟ ವಾಡಲು ಸಾರಿಗೆ ಸಂಪರ್ಕ ಇಲ್ಲ. ಗ್ರಾಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರೆ ಗ್ರಾಮದ ಜನತೆಯ ಬವಣೆ ಅರ್ಥವಾಗುತ್ತದೆ. ಶಂಕರ, ಗ್ರಾಮದ ಯುವಕ