ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ

7spt1
ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ತಿಮ್ಮಯ್ಯ ಉಚಿತವಾಗಿ ಟ್ರ್ಯಾಕ್‌ಸೂಟ್ ವಿತರಿಸಿದರು. ಬಸವರಾಜಪ್ಪ, ಸುರೇಶ್, ಪೌಲ್ವಿನ್, ಶುಭಾ ಇದ್ದರು.
Published on

ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 140 ವಿದ್ಯಾರ್ಥಿಗಳಿಗೆ ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ತಿಮ್ಮಯ್ಯ ಟ್ರ್ಯಾಕ್‌ಸೂಟ್ ಅನ್ನು ಉಚಿತವಾಗಿ ವಿತರಿಸಿದರು.

ಸೋಮವಾರ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದ ಮಹೇಶ್ ತಿಮ್ಮಯ್ಯ, ನಾನು ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಪಂಚಾಯಿತಿ ಅಧ್ಯಕ್ಷನಾಗಿದ್ದ ಸಂದರ್ಭ ಹೈಟೆಕ್ ಶೌಚಗೃಹ, ಕಾಂಪೌಂಡ್ ನಿರ್ಮಾಣ, ಹೊಸ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಇದೀಗ ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಹೇಳಿದರು.

ಸರ್ಕಾರದಿಂದ ನೀಡಲಾಗುವ ಗೌರವಧನವನ್ನು ವಿದ್ಯಾರ್ಥಿಗಳ ಟ್ರ್ಯಾಕ್ ಸೂಟ್‌ಗೆ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲೂ ಉಚಿತವಾಗಿ ಗುಣಮಟ್ಟದ ಶಿಕ್ಷಣವನ್ನು ಸರ್ಕಾರ ನೀಡುತ್ತಿದ್ದು, ಪಾಲಕರು ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ.ಎನ್.ಬಸವರಾಜಪ್ಪ ಮಾತನಾಡಿ, ಶಾಲೆಯಲ್ಲಿ ಮೂವರು ಶಿಕ್ಷಕರ ವರ್ಗಾವಣೆಯಾಗಿದೆ. ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಇಲಾಖೆ ನೇಮಿಸಿದೆ. ಪಾಲಕರು ಗೊಂದಲಕ್ಕೆ ಈಡಾಗಬಾರದು. ಎಲ್ಲ ವಿಷಯಗಳಿಗೂ ಬೋಧಕರಿದ್ದಾರೆ ಎಂದರು.

ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಪೌಲ್ವಿನ್ ಸಿಕ್ವೇರ, ಸದಸ್ಯೆ ಶುಭಾ, ಶಿಕ್ಷಕರಾದ ಹೇಮಲತಾ, ಧನ್ಯಾ, ಶಶಿಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net