

ಹಲಗೂರು: ಸಮೀಪದ ಬ್ಯಾಡ್ರಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು ರೋಟರಿ ಕ್ಲಬ್ ವತಿಯಿಂದ ಸುಮಾರು 3 ಲಕ್ಷ ರೂ. ಮೊತ್ತದ ಡೆಸ್ಕ್‌ಗಳನ್ನು ಗುರುವಾರ ವಿತರಿಸಲಾಯಿತು.
ಕ್ಲಬ್‌ನ ಸದಸ್ಯೆ ಕುಸುಮಾ ಮುನಿರತ್ನ ಅವರು ಡೆಸ್ಕ್‌ಗಳನ್ನು ಮುಖ್ಯ ಶಿಕ್ಷಕ ಸಿದ್ದಯ್ಯ ಅವರಿಗೆ ವಿತರಿಸಿ ಮಾತನಾಡಿ, ಡೆಸ್ಕ್‌ಗಳ ಮೇಲೆ ನೀವು ಯಾವುದೇ ಬರಹಗಳನ್ನು ಬರೆಯಬಾರದು. ಮುಂದೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಉತ್ತಮ ವ್ಯಾಸಂಗ ಮಾಡಿ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದರು.
ಕ್ಲಬ್ ಸದಸ್ಯರಾದ ಸಂದೀಪ್, ಪ್ರಭಾವತಿ, ಪೂಜಾ, ಬ್ಯಾಡ್ರಹಳ್ಳಿ ಪ್ರಸಾದ್, ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಾದೇವ, ಮುಖ್ಯ ಶಿಕ್ಷಕಿ ಅನ್ನಪೂರ್ಣ, ಶಿಕ್ಷಕರಾದ ಸಿದ್ದಯ್ಯ ಸೇರಿದಂತೆ ಸಹ ಶಿಕ್ಷಕರು ಉಪಸಿತರಿದ್ದರು.
ಬ್ಯಾಡ್ರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಡೆಸ್ಕ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಸಂದೀಪ್, ಪ್ರಭಾವತಿ, ಕುಸುಮಾ ಮುನಿರತ್ನ, ರಮೇಶ್, ಪೂಜಾ, ಬ್ಯಾಡ್ರಹಳ್ಳಿ ಪ್ರಸಾದ್, ಮಾದೇವ, ಅನ್ನಪೂರ್ಣ ಇತರರಿದ್ದರು.