

ಗದಗ: ಮಕ್ಕಳ ಕಲಿಕೆಯ ಬಗ್ಗೆ ಪಾಲಕರಲ್ಲಿ ಭರವಸೆ ಮೂಡುವ ಹಾಗೆ ಶಿಕ್ಷಕರು ಕಾರ್ಯನಿರ್ವಹಿಸಬೇಕು .ಶಿಕ್ಷಕರು ಅಧಿಕಾರಿಗಳು ಎನ್ನದೆ ಒಂದು ತಂಡವಾಗಿ ಕಾರ್ಯನಿರ್ವಹಿಸಿದಲ್ಲಿ ನಾವು ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡಬಹುದು. ಶಿಕ್ಷಕರಲ್ಲಿ ಅರ್ಪಣಾ ಮನೋಭಾವದ ಅಗತ್ಯತೆ ಇದೆ. ಅಂದಾಗ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಗದಗ ಶಹರ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಆರ್.ಎಸ್.ಬುರುಡಿ ಹೇಳಿದರು.
ರಾಷ್ಟ್ರಪ್ರಶಸ್ತಿ ಪಡೆದ ನಿವೃತ್ತ ಶಿಕ್ಷಕರಾದ ಎಸ್ ಎನ್ ಬಳ್ಳಾರಿ. ಮಾತನಾಡುತ್ತಾ ಶಿಕ್ಷಕರಿಗೆ ನೀಡುವ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಒಳ್ಳೆಯ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ಗೌರವಿಸುವಂತಾಗಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ತಾಲೂಕ ಅಧ್ಯಕ್ಷರಾದ ಪ್ರಕಾಶ. ದೊಡ್ಡಮನಿ. ಶ್ರೀಮತಿ. ಆರ್. ಎಲ್. ಹೂವಿನಹಳ್ಳಿ. ಶ್ರೀಮತಿ ಎನ್. ಆರ್. ನಿಡಗುಂದಿ. ಶ್ರೀಮತಿ. ಎಸ್ ಹೆಚ್. ದಂಡಿಗಿದಾಸರ. ಎಚ್ ಆರ್ ಕೋಣಿಮನಿ. ಈಶ್ವರ. ಕಟ್ಟಿಮನಿ ಕೆ.ಡಿ ತಳವಾರ. ಈಶ್ವರ. ಹೊಸಮನಿ. ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ.ಮಂಗಳಗುಡ್ಡ. ರವಿ. ಹೆಬ್ಬಳ್ಳಿ. ವಿ. ಟಿ. ದಾಸರಿ ಎಂ. ಹೆಚ್ ಲಕಮಾಪುರ. ಮಿಷನ್ನವರ.ಹೊಸಳ್ಳಿ. ರವಿ ಕೋಟಿ ಯವರ. ಚಾಮರಾಜ ಹುಡೇದ. ಜಿಲ್ಲಾ ಸಂಘದ ಪದಾಧಿಕಾರಿಗಳು ಸಂಘದ ಹಿತೈಷಿಗಳಾದ ಶ್ರೀಮತಿ ಮಹಾಲಕ್ಷ್ಮಿ ತೊಂಡಿಹಾಳ.ಮೋಹನ. ಮೆಣಸಿನಕಾಯಿ.ಇನ್ನಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉಣ್ಣಿ ಮಠ ಶಿಕ್ಷಕರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.