

ಆಲೂರು : ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕರ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್ ತಿಳಿಸಿದರು.
ತಾಲೂಕಿನ ಪಾಳ್ಯ ಹೋಬಳಿ ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಂಕ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಝಾನ್ಸಿ ಸರ್ಕಾರಿ ಅನುದಾನಿತ ವಿದ್ಯಾ ಸಂಸ್ಥೆಗೆ ಭೇಟಿ ನೀಡಿ ಗಂಗಾ ಮಕ್ಕಳ ಕಲಿಕೆ, ಮೂಲ ಸೌಕರ್ಯಗಳ ಮತ್ತು ಶಿಕ್ಷಕ ವೃಂದದ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕಾ ಮಟ್ಟ ಕಲಿಕೆಯ ಮೌಲ್ಯಮಾಪನ ಮುಂತಾದ ಎಲ್ಲಾ ಅಂಶಗಳನ್ನು ಪೋಷಕರು ಪರಿಶೀಲಿಸಿ ಅಗತ್ಯ ಸಲಹೆಗಳನ್ನು ಶಿಕ್ಷೆಕರಿಗೆ ನೀಡುವುದು ಉತ್ತಮ ಮುಖ್ಯ ಕರ್ತವ್ಯ ಎಂದರು.
ಸರ್ಕಾರಿ ಅನುದಾನಿತ ವಿದ್ಯಾ ಸಂಸ್ಥಯಾಗಿರುವ ಝಾನ್ಸಿ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಹಾಗೂ ವಸತಿ ಸೌಲಭ್ಯ ನಿರ್ವಹಣೆಗೆ ಅನುದಾನ ನೀಡಲಾಗುವುದು ಮತ್ತು ಸಂಕ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಸುಣ್ಣ ಬಣ್ಣ ಒಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಂಕಲಾಪುರ ಝಾನ್ಸಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿಗಳು, ಕಾರ್ಯದರ್ಶಿ ಕಾಂತರಾಜು, ಸಂಕ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುರಳಿ, ಮುಖಂಡ ಎಚ್.ಬಿ ಆನಂದ್, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಮಡಬಲು ಪಿ.ಡಿ.ಓ ಮಹಮದ್, ಶಿಕ್ಷಕರುಗಳಾದ ಹರೀಶ್, ಪಾಲಾಕ ಮುಂತಾದವರು ಹಾಜರಿದ್ದರು,