

ಚಾಮರಾಜನಗರ: ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಭರವಸೆ ನೀಡಿದರು.
ನಗರದ ಉಪ್ಪಾರ ಬಡಾವಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2025-26ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಪ್ಪಾರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಹಿಂದುಳಿದ ವರ್ಗದ ಮಕ್ಕಳೆ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಆಗಾಗಿಶಾಲೆಗೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಪ್ರಸ್ತುತ ಈ ಶಾಲೆ ಪಿಎಂಶ್ರೀ ಯೋಜನೆಯಡಿ ಬರುವುದರಿಂದ ಸರ್ಕಾರದಿಂದಲೂ ಹೆಚ್ಚಿನ ಅನುದಾನ ಕೂಡ ದೊರೆಯಲಿದೆ. ಪ್ರತಿಯೊಬ್ಬರೂ ಓದಿನ ಮಹತ್ವವನ್ನು ಅರಿತುಕೊಂಡು ಸಾಗಬೇಕಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳಿಗೆ ಸಮವಸ ಮತ್ತು ಸಿಹಿಯನ್ನು ವಿತರಣೆ ಮಾಡುವ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮ ಶೆಟ್ಟಿ, ಸಂಪನ್ಮೂಲ ಅಧಿಕಾರಿ ರಾಜೀವ್, ಸಿಆರ್‌ಪಿ ಹೇಮಾ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೂಸಣ್ಣ ಶೆಟ್ಟಿ, ಮಸಣಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶನಾಯಕ, ಶಿಕ್ಷಕರಾದ ಚಿಕ್ಕಬಸವಯ್ಯ, ರೋಷನ್, ಪ್ರಕಾಶ್, ನೇತ್ರಾ, ರಘು, ಸರೋಜಮ್ಮ, ಮಂಜುಳಾ, ಅರ್ಪಿತಾ,ಆಶಾ ಹಾಗೂ ಇತರರು ಹಾಜರಿದ್ದರು.