

ಕಿಕ್ಕೇರಿ: ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಉತ್ತೇಜಿಸುವ ಕೆಲಸ ಸಾಂಘೀಕವಾಗಿ ನಡೆಯಬೇಕಿದೆ ಎಂದು ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕಿರಣ್ ತಿಳಿಸಿದರು.
ಪಟ್ಟಣದ ಕೆಪಿಎಸ್ ಶಾಲೆ ನರ್ಸರಿ ಶಾಲೆಯ ಮಕ್ಕಳಿಗೆ ಸುಬ್ರಹ್ಮಣ್ಯ ಟ್ರಸ್ಟ್ ವತಿಯಿಂದ ಮಂಗಳವಾರ ಉಚಿತವಾಗಿ ಬ್ಯಾಗ್ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆ ಉಳಿದರೆ ಮಾತ್ರ ಪ್ರತಿಭಾನ್ವಿತರು ಬದುಕಲು ಸಾಧ್ಯ. ಸರ್ಕಾರಿ ಶಾಲೆಯಲ್ಲಿ ಎಲ್ಲ ರೀತಿಯ ಸೌಲಭ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಆಯ್ಕೆಯಾಗಿ ಬಂದಿರುವ ಶಿಕ್ಷಕರಿದ್ದಾರೆ. ಮಕ್ಕಳಿಗೆ ಪಠ್ಯ, ಕ್ರೀಡೆ ಎಲ್ಲ ರಂಗದಲ್ಲೂ ಬೆಳೆಯಲು ಪೂರಕವಾಗಿ ಕ್ರೀಡಾಂಗಣ, ಸೌಲಭ್ಯಗಳಿವೆ. ತಾಲೂಕಿನಲ್ಲಿಯೇ ಕೆಪಿಎಸ್ ಶಾಲೆಯು ಅತ್ಯಂತ ಸುಸಜ್ಜಿತವಾದ್ದು, ದಾಖಲಾತಿಗೆ ಪೈಪೋಟಿ ಇದೆ. ಈಗಿರುವಾಗ ಖಾಸಗಿ ಶಾಲೆಯ ವ್ಯಾಮೋಹವನ್ನು ಪಾಲಕರು ಬಿಡಬೇಕು ಎಂದು ಮನವಿ ಮಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಸದಸ್ಯ ದಿನೇಶ್‌ಬಾಬು, ಪ್ರಾಂಶುಪಾಲ ವಿನೋದಸಿಂಗ್, ಎನ್‌ಎಸ್‌ಎಸ್ ಅಧಿಕಾರಿ ಕುಮಾರಸ್ವಾಮಿ, ದೊರೆಸ್ವಾಮಿ ಮತ್ತಿತರರಿದ್ದರು.