

ಅಥಣಿ: ಬಡವರ ಅಭಿವೃದ್ಧಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪುರಸಭೆಯ ಅಧ್ಯಕ್ಷೆ ಶಿವಲೀಲಾ ಬುಟಾಳೆ ಹೇಳಿದರು.
ತಾಲೂಕಿನ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿಎಂ ಅಮೃತ ನಗರೋತ್ಥಾನ ಯೋಜನೆಯಡಿ ಇನ್‌ವರ್ಟರ್ ಹಾಗೂ ಪುರಸಭೆ ಅನುದಾನದಡಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಸ್ವಯಂ ಉದ್ಯೋಗಕ್ಕಾಗಿ ಮಹಿಳೆಯರಿಗೆ ಹೊಲಿಗೆ ಯಂತ್ರ, ಅಂಗವಿಕಲರಿಗೆ ತ್ರಿಚಕ್ರ ವಾಹನ, ಬಡ ವಿದ್ಯಾರ್ಥಗಳಿಗೆ ಲ್ಯಾಪಟಾಪ್, ಇನ್‌ವರ್ಟರ್, ಸಹಾಯಧನ ಚೆಕ್ ಹಾಗೂ ಅನೇಕ ಸೌಲಭ್ಯಗಳನ್ನು ಪ್ರತಿವರ್ಷ ವಿತರಿಸಲಾಗುತ್ತಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ, ಪಟ್ಟಣದ ಜೋಡು ಕೆರೆಗಳ ಅಭಿವೃದ್ಧಿ ಹಾಗೂ ಭಾಗೀರಥಿ ನಾಲಾ ಅಭಿವೃದ್ಧಿಗಾಗಿ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಪುರಸಭೆ ಆಡಳಿತ ಹಾಗೂ ಶಾಸಕರ ಮಾರ್ಗದರ್ಶನದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪುರಸಭೆಯ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸದಸ್ಯರಾದ ಕಲ್ಲೇಶ ಮಡ್ಡಿ, ಮಲ್ಲು ಬುಟಾಳೆ, ಉದಯ ಸೊಳಸಿ, ಪ್ರಮೋದ ಬಿಳ್ಳೂರ, ರಾಜು ಗುಡೋಡಗಿ, ಸಂತೋಷ ಸಾವಡಕರ, ದತ್ತ ವಾಸ್ಟರ್, ಶಶಿಕಾಂತ ಹುಲಕುಂದ, ನರಸು ಬಡಕಂಬಿ, ಮೃಣಾಲಿನಿ ದೇಶಪಾಂಡೆ, ಮಲ್ಲು ಹುದ್ದಾರ, ಆಶೀಫ್ ತಾಂಬೋಳಿ, ವಿಲಿನ ಯಳಮಲೆ, ದಿಲೀಪ ಲೊನಾರೆ, ಸೈಯ್ಯದ್‌ಅಮಿನ ಗದ್ಯಾಳ, ರಿಯಾಜ ಸನದಿ ಇತರರಿದ್ದರು.