ಸರ್ಕಾರಿ ಯೋಜನೆಗಳ ಜತೆ ಆಟ ಆಡ್ತಾ ಇದ್ದಿರಾ? ; ಪಾವಗಡ ತಾಲೂಕಿನ ಪಿಡಿಒಗಳಿಗೆ ಜಿಪಂ ಸಿಇಒ ವಿದ್ಯಾಕುಮಾರಿ ಕ್ಲಾಸ್

9 PVG 1
Published on

ಪಾವಗಡ : ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪಿಡಿಒಗಳು, ನರೇಗಾ ಇಂಜಿನಿಯರ್‌ಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಿಡಿಒಗಳ ಕಾರ್ಯವೈಖರಿಗೆ ಜಿಪಂ ಸಿಇಒ ವಿದ್ಯಾಕುಮಾರಿ ಮತ್ತು ಶಾಸಕ ವೆಂಕಟರವಣಪ್ಪ ಗರಂ ಆದರು.

ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ನಿರ್ವಹಿಸುವಾಗ ಸಂಬಂಧಪಟ್ಟ ಪಿಡಿಒಗಳು ಮತ್ತು ಇಂಜಿನಿಯರ್‌ಗಳು ಸ್ಥಳದಲ್ಲಿದ್ದು ಕಾಮಗಾರಿ ನಿರ್ವಹಿಸಿಬೇಕು. ಸರ್ಕಾರಿ ಯೋಜನೆಗಳ ಜತೆ ಆಟ ಆಡ್ತಾ ಇದ್ದಿರಾ? ಒಬ್ಬನಿಂದ ಜನರಿಗೆ ತೊಂದರೆಯಾದರೆ ಆ ಒಬ್ಬ ಏಕೆ ಬೇಕು?, ಮಾನದಂಡಗಳ ಪ್ರಕಾರ ಕೆಲಸ ಮಾಡಬೇಕು, ತಿದ್ದಿಕೊಳ್ಳುವುದಕ್ಕೆ ಅವಕಾಶ ಕೊಡ್ತಾ ಇದೀನಿ, ವ್ಯವಸ್ಥೆ ಬಗ್ಗೆ ಸರ್ಕಾರದ ಬಗ್ಗೆ ಭರವಸೆ ಮೂಡಬೇಕು ಎಂದು ಜಿಪಂ ಸಿಇಒ ವಿದ್ಯಾಕುಮಾರಿ ಎಚ್ಚರಿಸಿದರು.

ಕಡ್ಡಾಯವಾಗಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೂ ಗ್ರಾಮ ಪಂಚಾಯಿತಿಗಳಲ್ಲಿದ್ದು, ನಂತರ ಹಳ್ಳಿಗಳಿಗೆ ಹೋಗಿ ಜನರ ಕೆಲಸ ಮಾಡಿಕೊಡಿ. ಕರ್ತವ್ಯದಲ್ಲಿ ಲೋಪವಾದರೆ ಸೇವೆಯಿಂದ ವಜಾಗೊಳಿಸಲಾಗುವುದು ಎಂದರು.

ಶಾಸಕ ವೆಂಕಟರವಣಪ್ಪ ಮಾತನಾಡಿ, ಆರ್ಟ್‌ಆ್ ಲೀವ್ಹಿಂಗ್‌ನಿಂದ ನಡೆಯುತ್ತಿರುವ ಅಂರ್ತಜಲ ಚೇತನ ಯೋಜನೆಯಲ್ಲೂ ಪಿಡಿಒಗಳು ಮತ್ತು ಇಂನಿಜಿಯರಿಗಳು ಅವ್ಯವಹಾರ ಎಸಗುತ್ತಿದ್ದೀರಾ?, ಅವಶ್ಯಕತೆ ಇಲ್ಲದ ಕಡೆ ಚೆಕ್ ಡ್ಯಾಂಗಳನ್ನು ಹಾಕುತ್ತಿದ್ದೀರಾ? ಇದರಿಂದ ಏನು ಪ್ರಯೋಜನ? ಕೃಷಿಹೊಂಡ ಮತ್ತು ಚೆಕ್ ಡ್ಯಾಂಗಳನ್ನು ನಿರ್ಮಿಸುುವುದು ಬಿಲ್ ಮಾಡಿಕೊಳ್ಳುವುದಕ್ಕೆ ಅಲ್ಲ. ರೈತರಿಗೆ ಉಪಯೋಗವಾಗಲು. ಖಾತೆ ಮಾಡಿಕೊಡಲು ಹಣ ಕೇಳ್ತಿರಾ? ಈ ಬಗ್ಗೆ ಜನ ದೂರು ಸಲ್ಲಿಸುತ್ತಿದ್ದಾರೆ. ಉದ್ಯೋಗಖಾತ್ರಿಯಲ್ಲಿ ಎನ್‌ಎಂಆರ್ ತೆಗೆಯಲು ಹಣ ಪಡೀತೀರಾ, ಬಡವರ ಶಾಪ ನಿಮಗೆ ತಟ್ಟುತ್ತದೆ ಎಂದು ಪಿಡಿಒಗಳಿಗೆ ತರಾಟೆಗೆ ತೆಗೆದುಕೊಂಡರು.

ಗ್ರಾಮ ಪಂಚಾಯಿತಿಗಳಿಗೆ ತೆರಳಿ ತನಿಖೆ ನಡೆಸಿ ಕ್ರಮಕೈಗೊಳ್ಳಿ ಎಂದು ತಾಪಂ ಇಒ ಶಿವರಾಜಯ್ಯಗೆ ಶಾಸಕರು ಸೂಚಿಸಿದರು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೂನ್ಯ ಸಾಧನೆ ತೋರಿದ ಕನ್ನಮೇಡಿ, ಸಾಸಲುಕುಂಟೆ, ನಲಿಗಾನಹಳ್ಳಿ, ಬಿ.ಕೆ.ಹಳ್ಳಿ ಮತ್ತಿತರ ಪಿಡಿಒಗಳಿಗೆ ಎಚ್ಚರಿಕೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net