ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

02-2
ಸೇವಾ ಪಾಕ್ಷಿಕ ಫಲಾನುಭವಿಗಳ ಸಭೆಯಲ್ಲಿ ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಸರ್ಕಾರದ ಯೋಜನೆಗಳ ಕುರಿತು ವಿವರಿಸಿದರು. ಶಂಕ್ರಯ್ಯ ಹಿರೇಮಠ, ರಾಚಯ್ಯ ಹಿರೇಮಠ, ರತ್ನಾ ಗೋಧಿ, ಮಡಿವಾಳಪ್ಪ ಹೋಟಿ, ಬಸವರಾಜ ನೇಸರಗಿ ಇತರರು ಇದ್ದರು.
Published on

ಬೈಲಹೊಂಗಲ, ಬೆಳಗಾವಿ:
ಬಿಜೆಪಿ ಬಡವರ, ರೈತರ ಹಾಗೂ ದೀನ ದಲಿತರ ಅಭಿವೃದ್ಧಿಗಾಗಿ ಹಲವಾರು ಯೋಜನೆ ಜಾರಿಗೊಳಿಸಿದ್ದು, ಜನತೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು.

ಬಿಜೆಪಿ ಮಂಡಲ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದ ಭಾಗವಾದ ಫಲಾನುಭವಿಗಳ ಸಭೆ ಮತ್ತು ಆಯುಷ್ಮಾನ್ ಪಾಕ್ಷಿಕ-2022 ಕಾರ್ಯಕ್ರಮವನ್ನು ಸಮೀಪದ ಆನಿಗೋಳ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಯುಷ್ಮಾನ್ ಭಾರತ ಮೂಲಕ ಚಿಕಿತ್ಸೆ, ಮಹಿಳೆಯರ ಆರೋಗ್ಯಕ್ಕಾಗಿ ಉಜ್ವಲಾ ಯೋಜನೆ, ರೈತ ವರ್ಗದವರು ವರ್ಷಕ್ಕೆ 6 ಸಾವಿರ ರೂ. ಪಡೆಯುವ ಕಿಸಾನ್ ಸಮ್ಮಾನ್, ಜನಧನ ಖಾತೆಯ ಮಹತ್ವ ಹಾಗೂ ವಿಮೆಯ ಕುರಿತು ಗ್ರಾಮಸ್ಥರಿಗೆ ವಿವರಿಸಿದರು.

ಶಂಕ್ರಯ್ಯ ಹಿರೇಮಠ, ರಾಚಯ್ಯ ಹಿರೇಮಠ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರತ್ನಾ ಗೋಧಿ, ಮಡಿವಾಳಪ್ಪ ಹೋಟಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಬಸವರಾಜ ನೇಸರಗಿ, ನಾರಾಯಣ ನಲವಡೆ, ಡಾ. ಮಹಾಂತೇಶ ಪೂಜಾರ, ಈರಣ್ಣ ಮರಕುಂಬಿ, ಈರಣ್ಣ ಹೊಸಮನಿ, ಮಲ್ಲೇಶ ಆದೆನ್ನವರ, ಬಸವರಾಜ ಭಜಂತ್ರಿ, ಅಶೋಕ ಗುಂಡ್ಲೂರ, ವಿಜಯ ಪತ್ತಾರ, ಸುಧೀರ ವಾಲಿ, ಬಸವರಾಜ ಶಿಂತ್ರಿ, ಬಸು ಕಿವಡಿಮಠ, ಸಂತೋಷ ಮಾಲದಿನ್ನಿ, ನಾಗಪ್ಪ ಪಕೀರಣ್ಣವರ, ದುಂಡಪ್ಪಾ ಸುಣಗಾರ, ವಿಶಾಲ ಹೊಸೂರ, ಮಂಜು ಮಳಗಿ, ಆನಂದ ಮಳಗಿ, ಕೇದಾರಿ ಒಕ್ಕುಂದ, ಈರಯ್ಯ ಪೂಜೇರ, ನಾಗಪ್ಪ ಸಂಪಗಾವಿ, ಬಸಲಿಂಗಯ್ಯ ಚಿಕ್ಕಮಠ, ಸಿದ್ಧನಗೌಡ ಸಣನಾಯ್ಕರ, ನಿಂಗಪ್ಪ ಒಕ್ಕುಂದ, ಅಶೋಕ ದಳವಾಯಿ, ಮಕ್ತುಂಸಾಬ್ ನದಾಫ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net