ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸಿಗದ ವೇಗ

CTD 12 MEDICAL college (1)--08
Published on

ಡಿಪಿಎನ್‌ಶ್ರೇಷ್ಠಿ, ಚಿತ್ರದುರ್ಗ
ಈಗಾಗಲೇ ಕಾರ‌್ಯಾರಂಭವಾಗಿರುವ ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿನ ಕಟ್ಟಡ, ಟೆಂಡರ್ ಷರತ್ತಿನಂತೆ ನಿಗದಿತ 3 ವರ್ಷ ದೊಳಗೆ ಪೂರ್ಣಗೊಳ್ಳುವುದರ ಕುರಿತು ಅನುಮಾನ ವ್ಯಕ್ತವಾಗಿದೆ.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ, 397 ಕೋಟಿ ರೂ.ವೆಚ್ಚದೊಂದಿಗೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಯ ಹೊಸ ಆಸ್ಪತ್ರೆ, ಆಡಳಿತ ಕಚೇರಿ, ಅಕಾಡೆಮಿಕ್ ಬ್ಲಾಕ್, ಕಮರ್ಷಿಯಲ್ ಬಿಲ್ಡಿಂಗ್, ವೈದ್ಯಕೀಯ ಅಧೀಕ್ಷಕರ ವಸತಿ, ಡೀನ್‌ಕ್ವಾಟ್ರ ರ್ಸ್, ಹಾಸ್ಟೆಲ್‌ಗಳು, ಬೋಧಕ ಹಾಗೂ ಬೋಧಕತೇರ ಸಿಬ್ಬಂದಿ ವಸತಿ, ಮಾರ್ಚರಿ,ಲಾಂಡ್ರಿ ಬ್ಲಾಕ್‌ಗಳು ಇತ್ಯಾದಿ ಕಟ್ಟಡಗಳ ನಿರ್ಮಾಣ ವಾಗಬೇಕಿದೆ. ಆದರೆ ಸಕಾಲಕ್ಕೆ ಅನುದಾನ ಬಾರದಿದ್ದರೆ ಇವೆಲ್ಲವುಗಳ ನಿರ್ಮಾಣದಲ್ಲಿ ವಿಳಂಬವಾಗುವುದು ಖಚಿತವೆನ್ನಲಾಗುತ್ತಿದೆ.
ಆರೋಗ್ಯ ಇಲಾಖೆ ತುಮಕೂರು ಇಂಜಿನಿಯರಿಂಗ್ ವಿಭಾಗಕ್ಕೆ, ಕಾಲೇಜು ನಿರ್ಮಾಣ ಕಾಮಗಾರಿಯನ್ನು ಹಸ್ತಾಂತರಿಸಲಾಗಿದೆ. ಜಿ ಲ್ಲಾಸ್ಪತ್ರೆ ಆವರಣದಲ್ಲಿರುವ ಹಳೆಯ ಕಟ್ಟಡಗಳ ತೆರವು ಕಾರ‌್ಯದೊಂದಿಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಆದರೆ ಕಟ್ಟಡ ನಿ ರ್ಮಾಣದ ವಾರ್ಷಿಕ ಪ್ರಗತಿಗಾಗಿ 132 ಕೋಟಿ ರೂ.ಅನುದಾನ ಬಿಡುಗಡೆ ಮಾಡುವಂತೆ, ಮಹಾವಿದ್ಯಾಲಯ ವೈದ್ಯಕೀಯ ಶಿಕ್ಷಣ ಇ ಲಾಖೆ ನಿರ್ದೇಶಕರ ಕಚೇರಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಮಹಾವಿದ್ಯಾಲಯದಿಂದ ಪತ್ರ ಬರೆಯಲಾಗಿದೆ. ಆದರೆ ಈವರೆಗೂ ಅನುದಾನ ಬಿ ಡುಗಡೆಯಾಗಿಲ್ಲ. ಡಿಎಂಎಫ್‌ನಿಂದ ಮಂಜೂರಾಗಿರುವ 200 ಕೋಟಿ ರೂ.ಅನುದಾನದಲ್ಲಿ ಕಿಂಚಿತ್ತೂ ಮೊತ್ತವೂ ಬಂದಿಲ್ಲ.
ಜನವರಿಗೆ ಎನ್‌ಎಂಸಿ ತಂಡ
ಜನವರಿಗೆ ನ್ಯಾಷನಲ್ ಮೆಡಿಕಲ್ ಕಮಿಷನ್ ತಂಡ ಪರಿಶೀಲನೆಗೆಂದು ನಗರಕ್ಕೆ ಆಗಮಿಸಲಿದೆ ಎಂಬ ಮಾಹಿತಿ ಇದೆ. ಈ ತಂಡದ ಭೇ ಟಿ ಸಮಯದೊಳಗೆ ಕಟ್ಟಡ ನಿರ್ಮಾಣದಲ್ಲಿ ಸೂಕ್ತ ಪ್ರಗತಿಯಾಗಬೇಕಿದೆ. ಪರಿಶೀಲನೆ ಆಗಮಿಸುವ ತಂಡ ಕಾಲೇಜಿನ ಸೆಕೆಂಡ್ ಬ್ಯಾಚ್‌ಗೆ ಅನುಮತಿ ನೀಡಬೇಕಿದೆ.
ಈಗಿರುವ ಜಿಲ್ಲಾಸ್ಪತ್ರೆ 450 ಹಾಸಿಗೆ ಸಾಮರ್ಥ್ಯದೊಂದಿಗೆ, 180 ಹಾಸಿಗೆ ಸಾಮರ್ಥ್ಯದ ಕಾಲೇಜಿನ ಹೊಸ ಆಸ್ಪತ್ರೆಯನ್ನು ನಿರ್ಮಿಸ ಬೇಕಿದೆ. 79 ಬೋಧಕರ ನೇಮಕಕ್ಕೆ ಹಣಕಾಸು ಇಲಾಖೆ ಅನುಮತಿ ದೊರೆತಿದ್ದು, ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸ ಬೇಕಿ ದೆ. 110 ದಾದಿಯರು ಸೇರಿ 300ಕ್ಕೂ ಹೆಚ್ಚು ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಕೋರಿ ಮಹಾವಿದ್ಯಾಲಯ ಸರ್ಕಾರಕ್ಕೆ ಪತ್ರ ಬರೆದಿದೆ.
ಜಿಆರ್‌ಹಳ್ಳಿಯಲ್ಲಿರುವ ದಾವಣಗೆರೆ ವಿವಿ ಜ್ಞಾನಗಂಗೋತ್ರಿ ಕಟ್ಟಡದಲ್ಲಿ 150ವಿದ್ಯಾರ್ಥಿಗಳ ಮೊದಲನೇ ಬ್ಯಾಚ್ ತರಗತಿಗಳು ಆರಂ ಭವಾಗಿವೆ. ಸದ್ಯಕ್ಕೆ ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್ ಹಾಗೂ ಜಿಲ್ಲಾ ತರಬೇತಿ ಕೇಂದ್ರದ ಕಟ್ಟಡಗಳಲ್ಲಿ ವೈದ್ಯ ಕೀಯ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಕೋಟ್

ಪತ್ರ ಬರೆಯಲಾಗಿದೆ
ಡಿಎಂಎಫ್‌ನಿಂದ ಸರ್ಕಾರಿ ಮೆಡಿಕಲ್ ಕಾಲೇಜಿಗೆ 25 ಕೋಟಿ ರೂ.ಬಿಡುಗಡೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿ ದೆ. ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆಯುತ್ತಿದ್ದಂತೆ ಅನುದಾನ ಬಿಡುಗಡೆ ಮಾಡಲಾಗುವುದು.
ಜಿಆರ್‌ಜೆ ದಿವ್ಯಾಪ್ರಭು, ಜಿಲ್ಲಾಧಿಕಾರಿ,ಚಿತ್ರದುರ್ಗ.

ಅನುದಾನಕ್ಕೆ ತೊಂದರೆ ಆಗದು
ಕಾಲೇಜು ಕಟ್ಟಡಕ್ಕೆ 132 ಕೋಟಿ ರೂ.ಅನುದಾನ ಬಿಡುಗಡೆ ಕೋರಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯಲಾ ಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ, ಈ ವಿಚಾರದಲ್ಲಿ ಯಾವುದೇ ತೊಂದರೆಯಾಗದು. ಬೋಧಕರ ನೇಮಕಕ್ಕೂ ಶೀಘ್ರ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ. ಮೊದಲ ಬ್ಯಾಚ್‌ನ ತರಗತಿಗಳು ಜಿಆರ್‌ಹಳ್ಳಿ ದಾವಣಗೆರೆ ವಿವಿ ಕ್ಯಾಂಪಸ್ ಜ್ಞಾನಗಂಗೋತ್ರಿ ಯಲ್ಲಿ ಆರಂಭವಾಗಿವೆ. ಲ್ಯಾಬ್‌ಗಳು ಸಜ್ಜಾಗುತ್ತಿವೆ.
ಡಾ.ಬಿ.ವೈ.ಯುವರಾಜ್,ಅಧೀಕ್ಷಕರು, ಸರ್ಕಾರಿ ಮೆಡಿಕಲ್ ಕಾಲೇಜು,ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net