ಸರ್ಕಾರಿ ನೌಕರರೆಂದು ಪರಿಗಣಿಸಲಿ

27kudachi1
Published on

ಕುಡಚಿ: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಇಲ್ಲಿನ ಪುರಸಭೆ ಕಾರ್ಯಾಲಯದ ಎದುರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು.

ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಎಲ್ಲ ಸೌಲಭ್ಯ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ೨೦೨೩-೨೪ ಸಾಲಿನಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ೭ನೇ ವೇತನ ಶ್ರೇಣಿಯಲ್ಲಿ ವೇತನ ಪಾವತಿಸಬೇಕು. ಅಕೌಂಟೆಂಟ್ ಮತ್ತು ಜೂನಿಯರ್/ ಸೀನಿಯರ್ ಪ್ರೋಗ್ರಾಮರ್, ನೋಡಲ್ ಇಂಜಿನಿಯರ್ / ನೋಡಲ್ ಆಫೀಸರ್ ಎಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸಂಘದ ಜಿಲ್ಲಾ ಉಪಾಧ್ಯಕ್ಷ ಸುಖದೇವ ಶಿಂಧೆ ಮಾತನಾಡಿ, ಸರ್ಕಾರ ಕೂಡಲೇ ಪೌರನೌಕರರ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.

ನೌಕರರ ಸಂಘದ ಕುಡಚಿ ಅಧ್ಯಕ್ಷ ಸತೀಶ ನಡೋಣಿ, ಉಪಾಧ್ಯಕ್ಷ ಅರುಣ ಐಹೊಳೆ, ಕಾರ್ಯದರ್ಶಿ ವಿಜಯ ಶಿಂಧೆ, ಶಾಹೀದ್ ಮಾರುಫ, ರಮೇಶ ನಡೋಣಿ, ಎಸ್.ಬಿ. ಕದಂ, ಭಾಗ್ಯಶ್ರೀ ಹೇರೂರ, ಛಾಯಾ ಕಂತ್ರಾಟೆ, ರತ್ನವ್ವ ಕಾಂಬಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net