ಸರ್ಕಾರಿ ನೌಕರರ ಸಂಘದ ಹನೂರು ಘಟಕಕ್ಕೆ ಆಯ್ಕೆ

Published on

ಹನೂರು: ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನ ಆಯ್ಕೆ ಸಂಬಂಧ ಸೋಮವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲೆ ಕ್ಷೇತ್ರದಿಂದ ಗುರುಸ್ವಾಮಿ, ಗಿರೀಶ್, ಚಂದ್ರನ್ ಪ್ರೌಢಶಾಲೆಯಿಂದ ರವೀಶ್‌ಕುಮಾರ್ ಹಾಗೂ ಕಾಲೇಜು ಶಿಕ್ಷಣ ಕ್ಷೇತ್ರದಿಂದ ನರೇಂದ್ರನಾಥ್ ಜಯ ಗಳಿಸಿದ್ದಾರೆ.

ತಾಲೂಕಿನಲ್ಲಿ ನಿರ್ದೇಶಕರ ಸ್ಥಾನದ ಆಯ್ಕೆಗೆ ಪಶುಪಾಲನಾ ಇಲಾಖೆಯಲ್ಲಿ ಮೀಸಲಿದ್ದ 1, ತಾಲೂಕು ಕಚೇರಿಯಲ್ಲಿ 2, ಶಾಲಾ ಶಿಕ್ಷಣ ಇಲಾಖೆಯ ಆಡಳಿತ ಮಂಡಳಿಯಲ್ಲಿ 1, ಅರಣ್ಯ ಇಲಾಖೆ 2, ಆರೋಗ್ಯ ಇಲಾಖೆ 4, ಸಮೂಹ ಸಂಪನ್ಮೂಲ ಕೇಂದ್ರ, ಉಪ ಖಜಾನೆ ಹಾಗೂ ಭೂ ಮಾಪನ ಇಲಾಖೆಯಲ್ಲಿ ತಲಾ 1 ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 2 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇನ್ನು ಪ್ರಾಥಮಿಕ ಶಾಲಾ ಕ್ಷೇತ್ರದಿಂದ 3, ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣ ಕ್ಷೇತ್ರದಿಂದ ತಲಾ 1 ನಿರ್ದೇಶಕರ ಸ್ಥಾನಕ್ಕೆ ಚುನಾವಣೆಯನ್ನು ನಿಗದಿಗೊಳಿಸಲಾಗಿತ್ತು.

ಸೋಮವಾರ ನಡೆದ ಚುನಾವಣೆಯಲ್ಲಿ ಈ ಮೂರು ಕ್ಷೇತ್ರದಲ್ಲಿದ್ದ 692 ಮತದಾರರ ಪೈಕಿ 662 ಸರ್ಕಾರಿ ನೌಕರರು ಮತ ಚಲಾಯಿಸಿದರು. ಪ್ರಾಥಮಿಕ ಶಾಲಾ ಕ್ಷೇತ್ರದಿಂದ ಕೊಳಂದೈರಾಜು, ಗುರುಸ್ವಾಮಿ ಗಿರೀಶ್, ಚಂದ್ರನ್ ಚಾಲ್ಸ್ ವಿಲಿಯಂ ಡೇವಿಡ್, ಮಾದೇಶ್ ಹಾಗೂ ಚಂದ್ರನ್ ಸ್ಪರ್ಧಿಸಿದ್ದು, ಇವರಲ್ಲಿ ಗುರುಸ್ವಾಮಿ 248, ಗಿರೀಶ್ 209, ಚಂದ್ರನ್ 191 ಮತಗಳನ್ನು ಪಡೆದು ಜಯ ಗಳಿಸಿದರೆ, ಪ್ರೌಢಶಾಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೂವರಲ್ಲಿ ರವೀಶ್‌ಕುಮಾರ್ 42 ಮತಗಳನ್ನು ಪಡೆದು ಜಯ ಗಳಿಸಿದರು. ಇನ್ನು ಕಾಲೇಜು ಶಿಕ್ಷಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೂವರಲ್ಲಿ ನರೇಂದ್ರನಾಥ್ 16 ಮತಗಳನ್ನು ಪಡೆದು ವಿಜಯ ಸಾಧಿಸಿದರು. ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯ ಶಿಕ್ಷಕ ಅಮಲ್‌ದಾಸ್ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net