ಸರ್ಕಾರಿ ನೌಕರರ ಮಹಾಸಮ್ಮೇಳನ 27ಕ್ಕೆ

Pressmeet
Published on

ಚಿತ್ರದುರ್ಗ: ಹಳೆ ಪಿಂಚಣಿ ಯೋಜನೆ ಮರು ಜಾರಿ, 7ನೇ ವೇತನ ಆಯೋಗದ ವರದಿಯ ಅನುಷ್ಠಾನ, ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆಗೊಳಿಸಲು ಸರ್ಕಾರಕ್ಕೆ ಆಗ್ರಹಿಸಿ ಫೆ. 27ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11.30ಕ್ಕೆ ಸಿಎಂ ಸಿದ್ದರಾಮಯ್ಯ ಮಹಾಸಮ್ಮೇಳನ ಉದ್ಘಾಟಿಸುವರು. ರಾಜ್ಯದ ಮೂಲೆ-ಮೂಲೆಗಳಿಂದ 2 ಲಕ್ಷ ನೌಕರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಜಿಲ್ಲೆಯಿಂದ 5ಸಾವಿರ ನೌಕರರು ತೆರಳಲಿದ್ದು, ಜಿಲ್ಲಾ ಕೇಂದ್ರದಿಂದ 20, ಇನ್ನುಳಿದ ತಾಲೂಕು ಕೇಂದ್ರದಿಂದ ತಲಾ 10 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಸ್ಥಳದಿಂದ ಬೆಳಗ್ಗೆ 6ಕ್ಕೆ ಹೊರಡಲಿವೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಎಸ್.ಕೆ.ಮಂಜುನಾಥ್, ಖಜಾಂಚಿ ವೀರೇಶ್, ಉಪಾಧ್ಯಕ್ಷರಾದ ಸುಧಾ, ಚಂದ್ರನಾಯ್ಕ್, ಪಾತಪ್ಪ, ಕಾರ್ಯಾಧ್ಯಕ್ಷರಾದ ಡಿ.ಎಂ.ಸಿದ್ದೇಶ್ವರ, ಎಸ್.ವೀರಣ್ಣ, ರಾಜ್ಯ ಪರಿಷತ್ ಸದಸ್ಯ ಬಾಗೇಶ್ ಆರ್.ಉಗ್ರಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net