

ಬಸವಕಲ್ಯಾಣ: ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬAಧ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಶಾಸಕ ಶರಣು ಸಲಗರ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕಕರ ಸಂಘದ ಬಸವಕಲ್ಯಾಣ ಮತ್ತು ಹುಲಸೂರು ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿಯ ನಿಯೋಗದಿಂದ ಗುರುವಾರ ಶಾಸಕರ ಕಾರ್ಯಾಲಯಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿ, ಬೇಡಿಕೆ ಈಡೇರಿಸುವ ಕುರಿತು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಪತ್ರ ಬರೆದು ಒತ್ತಾಯಿಸಬೇಕು ಎಂದು ಕೋರಲಾಯಿತು.
ರಾಜ್ಯ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಎನ್‌ಪಿಸಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು, ಸರ್ಕಾರಿ ನೌಕರರು ಮತ್ತು ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಆಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು ಎನ್ನುವ ಪ್ರಮುಖರ ಬೇಡಿಕೆ ಈಡೇರಿಸುವ ಕುರಿತು ಒತ್ತಾಯಿಸಲು ಮನವಿ ಮಾಡಲಾಯಿತು.
ಶಾಸಕ ಸಲಗರ, ಸರ್ಕಾರಿ ನೌಕಕರ ಸಂಘದ ಮನವಿ ಪತ್ರ ಸ್ವೀಕರಿಸಿ, ಬೇಡಿಕೆ ಈಡೇರಿಸುವ ಸಂಬAಧ ಅಧಿವೇಶನದಲ್ಲಿ ನಿಮ್ಮೆಲ್ಲರ ಧ್ವನಿಯಾಗಿ ಮಾತನಾಡುವೆ ಎಂದು ಹೇಳಿದರು.
ಸಂಘದ ಬಸವಕಲ್ಯಾಣ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮೇತ್ರೆ, ಕಾರ್ಯದರ್ಶಿ ಸಂತೋಷ ಕಾವಲಗೆ, ಹುಲಸೂರು ತಾಲೂಕು ಅಧ್ಯಕ್ಷ ಭೀಮಾಶಂಕರ ಅದೆಪ್ಪ, ಕಾರ್ಯದರ್ಶಿ ನವನಾಥ ದೇಶಮುಖ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಅಕ್ಕಣ್ಣ, ಹುಲಸೂರು ತಾಲೂಕು ರಾಜಕುಮಾರ ನಂದೋಡೆ, ಪೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಯೋಜರಾಜ ಕೆ, ಕಾರ್ಯದರ್ಶಿ ವಿಜಯಕುಮಾರ ಮಾನೆ, ಹುಲಸೂರು ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಡಕೆ, ಮದನ ಪಾಟೀಲ್, ನೌಕರರ ಎಸ್‌ಸಿ ಎಸ್‌ಟಿ ಸಂಘದ ಅಧ್ಯಕ್ಷ ಅಂಬಣ್ಣ ಘಾಂಗ್ರೆ, ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಕಾಶಪ್ಪ ಬಾಲಿಕಿಲೆ,, ವೃಂದ ಸಂಘದ ಅಧ್ಯಕ್ಷರು ಪದಾಧಿಕಾರಿಗಳಾದ ರಾಜಕುಮಾರ ಬಿರಾದಾರ, ವರ್ಷಾ ಪಾಂಚಾಳ, ತುಕಾರಾಂ ರೊಂಟೆ, ಗುರುನಾಥ ಮೈಲಾರೆ, ಲೋಹಿತ ಕಾಂಬಳೆ, ಮಹತಾಪ ಪಟೇಲ್, ಸಂತೋಷ ಮೊರೆ, ಅಶೋಕ ಹುಡೆ, ಬಸವಣಪ್ಪ ನೆಲ್ಲಗಿ, ಜಗನ್ನಾಥ ಪತಂಗೆ, ಲಕ್ಷಿö್ಮÃಬಾಯಿ ಪಾಟೀಲ್, ಕಾಶೀನಾಥ ಚಂಡಕಾಪುರೆ, ಅಪರಂಜಿ ಇತರರು ನಿಯೋಗದಲ್ಲಿದ್ದರು.