

ಚಿತ್ರದುರ್ಗ: ಮೂಲ ಸೌಕರ್ಯಗಳ ಸುಧಾರಣೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಗು ರುವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟಿಸಿದರು.
ಬೋಧನಾ ಕೊಠಡಿ,ಗ್ರಂಥಾಲಯ,ಹಾಸ್ಟೆಲ್‌ಸಮಸ್ಯೆ ,ಶುದ್ಧ ಕುಡಿವ ನೀರಿನ ಘಟಕ,ಶೌಚಗೃಹ ಮೊದಲಾದ ಸೌಕರ್ಯಗಳು ಕೊರತೆ ಇದೆ. ಈಕು ರಿತಂತೆ ಪ್ರಾಚಾರ‌್ಯರು,ಜಿಲ್ಲಾಸರ್ಜನ್ ಸೇರಿ ಅನೇಕ ಅಧಿಕಾರಿಗಳಿಗೆ,ಈಚೆಗೆ ನಗರಕ್ಕೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿ ವ ಶರಣ ಪ್ರಕಾಶ ಆರ್.ಪಾಟೀಲ ಅವರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವೃತ್ತಿಪರ ಕೋರ್ಸ್‌ನರ್ಸಿಂಗ್ ಕ್ಷೇತ್ರದಡೆ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಬಿಎಸ್‌ಸಿ ಹಾಗೂ ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಕಳೆದ 2 ವರ್ಷಗಳ ಹಿಂದೆ ಪ್ರಾರಂಭವಾದ ಈ ಕಾಲೇಜಿನಲ್ಲಿ ಪ್ರಸ್ತುತ 120 ವಿದ್ಯಾರ್ಥಿಗಳಿದ್ದಾರೆ. ಇನ್ನೊಂದು ತಿಂಗಳಲ್ಲಿ ಈ ಸಂಖ್ಯೆ 180ಕ್ಕೆ ಏರಲಿದೆ. ಪಠ್ಯಕ್ರಮದ ಅನುಸಾರ ಸೆಪ್ಟೆಂಬರ್ ಒಂದರಿಂದ ಕಮ್ಯುನಿಟಿ ಪೋಸ್ಟಿಂಗ್‌ಗಾಗಿ ಅಗತ್ಯವಿರುವ ಸಾರಿಗೆ ವ್ಯವಸ್ಥೆ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದರು.
ಸ್ಥಳಕ್ಕೆ ಧಾವಿಸಿದ ಎಸಿ ಎಂ.ಕಾರ್ತಿಕ್ ಅವರು ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿದರು. ಜಿಲ್ಲಾಧಿಕಾರಿ ಜತೆ ಚರ್ಚಿಸಿ ಅಗತ್ಯ ಕ್ರಮಗ ಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಡಿಎಚ್‌ಒ ಡಾ.ಆರ್.ರಂಗನಾಥ್,ಪ್ರಭಾರ ಡಿಎಸ್ ಡಾ.ದೇವರಾಜ್ ಮತ್ತಿತರ ಅಧಿ ಕಾರಿಗಳು,ರವಿ,ಸಗೀರ್,ವಿಶಾಲ್,ಪ್ರಸನ್ನ,ಮಂಜುಳಾ,ವಂದನಾ,ಅನಿತಾ ಮತ್ತಿತರ ವಿದ್ಯಾರ್ಥಿಗಳು ಇದ್ದರು.
(ಸಿಟಿಡಿ 31 ಸ್ಟ್ರೈಕ್--2
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಸರ್ಕಾರಿ ನರ್ಸಿಂಗ್ ಕಾಲೇಜು ವಿದ್ಯಾ ರ್ಥಿಗಳ ಅಹವಾಲನ್ನು ಎಸಿ ಎಂ.ಕಾರ್ತಿಕ್ ಆಲಿಸಿದರು. ಡಿಎಚ್‌ಒ ಡಾ.ಆರ್.ರಂಗನಾಥ್,ಪ್ರಭಾರ ಡಿಎಸ್ ಡಾ.ದೇವರಾಜ್ ಮತ್ತಿತ ರರು ಇದ್ದರು.