ಸರ್ಕಾರಿ ಜಾಗ ವಶಕ್ಕೆ ಪಡೆಯಿರಿ

7 ckm 5 web
Published on

ಚಿಕ್ಕಮಗಳೂರು: ನಗರದ ಕೆಎಂ ರಸ್ತೆ ಐಡಿಎಸ್​ಜಿ ಕಾಲೇಜು ಎದುರಿನ ಸರ್ಕಾರಿ ಜಾಗವನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಸರ್ಕಾರಿ ಕಟ್ಟಡಗಳನ್ನು ನಿರ್ವಿುಸಿ ಸಾರ್ವಜನಿಕರ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿ ಮಾಹಿತಿ ಹಕ್ಕು ಹೋರಾಟಗಾರ ಸಿ.ಎನ್.ದೇವರಾಜ ಅರಸ್ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಬೀಕನಹಳ್ಳಿ ಗ್ರಾಮದ ಸರ್ವೆ ನಂ.81ರ 6.12 ಎಕರೆ, 82ರ 7.37 ಎಕರೆ ಜಾಗವನ್ನು ವಶಕ್ಕೆ ಪಡೆಯಬೇಕು. ಸರ್ಕಾರಿ ಜಾಗ ವಶಪಡಿಸಿಕೊಳ್ಳುವ ಸಂಬಂಧ ದೂರು ನೀಡಿದ್ದಾಗ ಡಿಸಿ ಕಚೇರಿಯಿಂದ ಉಪ ವಿಭಾಗಾಧಿಕಾರಿಗೆ ವರ್ಗಾಯಿಸಿ ಅವರಿಂದ ತಹಸೀಲ್ದಾರ್ ಮೂಲಕ ಸರ್ವೆ ನಕ್ಷೆ ತಯಾರಿಸಿ ವರದಿ ನೀಡಲು ತಿಳಿಸಲಾಗಿತ್ತು. ಅದರಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸರ್ವೆ ನಕ್ಷೆಯನ್ನು ತಯಾರಿಸಿ ವರದಿಯನ್ನು ತಹಸೀಲ್ದಾರ್ ಕಚೇರಿಗೆ ನೀಡಿದ್ದರು. ಸರ್ವೆ ನಂ.81ರ ಜಾಗ ಸರ್ಕಾರಿ ಸಾಗುವಳಿಯಲ್ಲಿದೆ. ಸರ್ವೆ ನಂ.82ರಲ್ಲಿರುವ ಜಮೀನನ್ನು ಮರು ಸರ್ವೆ ನಡೆಸಿ ಸರ್ಕಾರಿ ಖರಾಬಿನಲ್ಲಿ ದಾಖಲಾಗಿರುತ್ತದೆ ಎಂದು ನಕ್ಷೆ ತಯಾರಿಸಿ ವರದಿ ನೀಡಲಾಗಿದೆ. ಹಾಗಾಗಿ ತಹಸೀಲ್ದಾರ್ ಕಚೇರಿಯಿಂದ ಕಡತವನ್ನು ತರಿಸಿಕೊಂಡು 14.09 ಎಕರೆ ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳಬೇಕು. ಅಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ವಿುಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net