ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

WhatsApp Image 2022-12-02 at 3.40.15 PM
Published on

ಆಲೂರು: ಬೆಂಗಳೂರಿನ ಯಲಹಂಕದಲ್ಲಿ ಅಪಘಾತಕ್ಕೊಳಗಾಗಿದ್ದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚಿಕ್ಕಕಣಗಾಲುಹೊಸಳ್ಳಿ ಗ್ರಾಮದ ಭಾರತೀಯ ಸೇನೆಯ ಯೋಧ ಹೆಚ್.ಪಿ ಚನ್ನಬಸಪ್ಪ (54) ಅವರು ಬುಧುವಾರ ಬೆಳಗ್ಗೆ ಮಿಲಿಟರಿ ಕಮಾಂಡೋ ಆಸ್ಪತ್ರೆಯಲ್ಲಿ ಮೃತಪಟ್ಟು ಗುರುವಾರ ಹುಟ್ಟೂರಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

ಪಾರ್ಥೀವ ಶರೀರವನ್ನು ನೆರೆದಿದ್ದ ಜನಸಾಗರದ ಮದ್ಯೆ ಸೇನೆ ಸಿಬ್ಬಂದಿಗಳು ಅಂತ್ಯಕ್ರಿಯೆ ಸ್ಥಳಕ್ಕೆ ಹೊತ್ತೊಯ್ದರು. ಈ ಸಂದರ್ಭದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಎಚ್. ಪಿ. ಚನ್ನಬಸಪ್ಪ ಅವರಿಗೆ ವಂದೆ ಮಾತರಂ ಘೋಷ ಮೊಳಗಿತು.

ರೈಫಲ್‌ನಿಂದ ಮೂರು ಸುತ್ತು ಗುಂಡು ಹಾರಿಸಲಾಯಿತು.

ಇಡಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net