ಸರ್ಕಾರಿ ಕಾಲೇಜು ಎಂಬ ಕೀಳರಿಮೆ ಬೇಡ

17 vtp 2 senior collage
Published on

ವಿರಾಜಪೇಟೆ: ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗೆ ಸರಿ ಸಮಾನವಾಗಿದ್ದು, ಯಾವ ರೀತಿಯಲ್ಲಿಯೂ ಕಡಿಮೆ ಇಲ್ಲ. ಆದ್ದರಿಂದ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಡ ಎಂದು ವಿರಾಜ ಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.


ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯೇತರ ಚಟುವಟಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಶ ಕಟ್ಟುವ ಜವಬ್ದಾರಿ ನಮ್ಮ ಯುವ ಜನಾಂಗದ್ದಾಗಿದೆ. ಇದರಲ್ಲಿ ಅವರ 18 ರಿಂದ 21 ರ ವಯೋಮಿತಿ ಮಹತ್ವದ ಕಾಲವಾಗಿರುತ್ತದೆ. ಪದವಿ ಮುಗಿಸಿದ ಬಳಿಕ ಏನು ಎಂಬ ಬದುಕನ್ನು ಅರಸುವ ಕಾಲದಲ್ಲಿ ಪಠ್ಯೇತರ ಚಟುವಟಿಕೆ ನೆರವಿಗೆ ಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಬದಕು ಕಟ್ಟಿಕೊಳ್ಳಬಹುದು ಎಂದರು.


ಇದಕ್ಕೆ ಪೂರಕವಾಗಿ ಇಂದು ಹೊಸ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿದೆ. ಇದರಿಂದ ವಿದ್ಯಾರ್ಥಿ ಗಳಿಗೆ ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗ ಲಿದ್ದು, ಯಾವ ಅತಂಕವೂ ಬೇಡ. ಮುಖ್ಯವಾಗಿ ವಿದ್ಯಾರ್ಥಿ ಗಳು ಯಾವುದೇ ಆಕರ್ಷಣೆಗಳಿಗೆ ಒಳಗಾಗಿ ಉತ್ತಮ ಬದಕನ್ನು ಹಾಳು ಮಾಡಿಕೊಳ್ಳಬೇಡಿ. ಗಾಂಜಾ, ಅಫೀಮು ಗಳಂತಹ ಮಾದಕ ನಶೆಗೆ ಬಲಿಯಾಗದೆ ಜಾಗ್ರತೆ ವಹಿಸಿ. ನಿಮ್ಮ ತಂದೆ ತಾಯಿ ಕಂಡ ಕನಸನ್ನು ನನಸು ಮಾಡುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದನ್ನು ಅರಿತುಕೊಳ್ಳಬೇಕು. ಪದವಿ ಮಾತ್ರ ಗಳಿಸಿದರೆ ಸಾಲದು, ಉತ್ತಮ ಅಂಕ ಪಡೆದು ಕೌಶಲ್ಯ ಹೊಂದಿರಬೇಕು ಎಂದು ಬೋಪಯ್ಯ ಹೇಳಿದರು.


ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿ.ವಿ.ಯ ಸಿಂಡಿಕೇಟ್ ಸದಸ್ಯ ತಳೂರು ಕಿಶೋರ್‌ಕುಮಾರ್, ಉಪನ್ಯಾಸಕ ಡಾ.ಭೀಮರಾಜು ಈರೇಗೌಡ, ಅಂತರಾಷ್ಟ್ರೀಯ ಹಾಕಿ ಆಟಗಾರ್ತಿ ಕಂಬಿರಂಡ ಪೊನ್ನಮ್ಮ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ ಕೆ.ಪಿ. ದಯಾನಂದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ವೇಣುಗೋಪಾಲ್ ನೂತನ ಸಮಿತಿ ಸದಸ್ಯರಿಗೆ ಪ್ರತಿಜ್ಞಾನ ವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net