ಸರ್ಕಾರಿ ಕಾಮಗಾರಿಗಳಿಗೂ ಬೇಕು ಸಿಆರ್ ಜಡ್ ಅನುಮತಿ

DSC_8909.JPG
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಕರಾವಳಿ ನಿಯಂತ್ರಣ ವಲಯ(ಸಿಆರ್ ಜಡ್) ಜಿಲ್ಲಾ ಸಮಿತಿಯ ಗಮನಕ್ಕೆ ತರದೇ ಯಾವುದೇ ಇಲಾಖೆಗಳು ಕಾಮಗಾರಿಗಳಿಗೆ ನಿರಾಕ್ಷೇಪಣಾ ಪತ್ರ ನೀಡಬಾರದು ಎಂದು‌ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಸಿಆರ್ ಜಡ್ ನಿರ್ವಹಣಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತ‌ನಾಡಿದರು.
ಕರ್ನಾಟಕ ರಾಜ್ಯ ಸಿಆರ್ ಜಡ್ ನಿರ್ವಹಣಾ ಸಮಿತಿ ಪರಿಶೀಲನೆ ಮಾಡಿ ನಿಯಮ ಉಲ್ಲಂಘನೆಯಾಗದ ಬಗ್ಗೆ ವರದಿ ನೀಡಿದ ನಂತರವಷ್ಟೇ ಇಲಾಖೆಗಳು ನಿರಾಕ್ಷೇಪಣಾ ಪತ್ರ ನೀಡಬೇಕು.‌ ಪಿಡಬ್ಲ್ಯುಡಿ ಸೇರಿದಂತೆ ಸರ್ಕಾರಿ ಇಲಾಖೆಗಳು ಸಿಆರ್ ಜಡ್ ವ್ಯಾಪ್ತಿಯಲ್ಲಿ ಮಾಡುವ ಕಾಮಗಾರಿಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.
ಗ್ರಾಮವಪಂಚಾಯಿತಿ  ಅಭಿವೃದ್ಧಿ ಅಧಿಕಾರಿಗಳ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ನಿರಾಕ್ಷೇಪಣಾ ಪತ್ರ ನೀಡುವ ಕುರಿತಾದ ವಿಚಾರದಲ್ಲಿ ಆಗಬಹುದಾದ ಸಮಸ್ಯೆಯನ್ನು ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಸಿಆರ್ ಜಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ನೋಟಿಸ್ ನೀಡಬೇಕು. ಇಲ್ಲಿಯವರೆಗೆ  ಸ್ಥಳೀಯವಾಗಿ  ಅನುಮತಿ ನೀಡಿದ ಹಾಗೂ ರಾಜ್ಯ ಮಟ್ಟದ ಸಮಿತಿಗೆ ವರ್ಗಾಯಿಸಲಾದ ಅರ್ಜಿಗಳ ನಿಖರವಾದ ಅಂಕಿ-ಸಂಖ್ಯೆಗಳನ್ನು ನೀಡಬೇಕು. ನಿರಾಕ್ಷೇಪಣಾ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದರು.
ಜಿಪಂ‌ ಸಿಇಒ ಪ್ರಿಯಾಂಗಾ ಎಂ.
ಸಿಆರ್‌ಜಡ್‌ ಎಸಿಎಫ್ ಐ.ಆರ್. ದಫೇದಾರ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ತಳೇಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net