ಸರ್ಕಾರಿ ಕಡತಗಳಿಗೆ ಬೆಂಕಿ?:ಜಿಲ್ಲಾಧಿಕಾರಿಗೆ ದೂರು ನೀಡಿದ ಗ್ರಾಪಂ ಸದಸ್ಯ

ಸರ್ಕಾರಿ ಕಡತಗಳಿಗೆ ಬೆಂಕಿ?:ಜಿಲ್ಲಾಧಿಕಾರಿಗೆ ದೂರು ನೀಡಿದ ಗ್ರಾಪಂ ಸದಸ್ಯ
Published on

ಹಾಸನ: ಹಾಸನದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಡತಗಳನ್ನು ಅರಸೀಕೆರೆ ತಾಲೂಕಿನಲ್ಲಿ ಹಬ್ಬನಘಟ್ಟ ಗ್ರಾಮದ ಖಾಸಗಿ ಜಾಗದಲ್ಲಿ ಸುಡಲಾಗಿದೆ ಎಂದು ಕುರುವಂಕ ಗ್ರಾಪಂ ಸದಸ್ಯ ಬೈರಗೊಂಡನಹಳ್ಳಿಯ ಉಮೇಶ್ ಎಂಬುವವರು ಹಾಸನ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.
ಜುಲೈ 7ರಿಂದ ಜು.10ರ ಅವಧಿಯಲ್ಲಿ ಅರಸೀಕೆರೆ ತಾಲೂಕಿನಲ್ಲಿ ಹಬ್ಬನಘಟ್ಟ ಗ್ರಾಮದ ಖಾಸಗಿ ಜಾಗದಲ್ಲಿ ರಾತ್ರೋರಾತ್ರಿ ನಿಗಮದ ಕಡತಗಳನ್ನು ಸುಟ್ಟು ಹಾಕಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ವಿರುದ್ದ ಆರೋಪ ಕೇಳಿ ಬಂದಿದ್ದು, ದೇವರಾಜ ಅರಸು ನಿಗಮಕ್ಕೆ ಸೇರಿದ್ದು ಎಂದು ಹೇಳಲಾದ ದಾಖಲೆಗಳನ್ನು ಸುಡುತ್ತಿರುವ ವೀಡಿಯೋಗಳ ಜತೆಗೆ ದೂರು ನೀಡಿದ್ದಾರೆ.
ಕೆಲ ಮಧ್ಯವರ್ತಿಗಳ ಜತೆ ಸೇರಿ ಸರ್ಕಾರಿ ಯೋಜನೆ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರದ ಅನುಮತಿ ಇಲ್ಲದೆ, ಖಾಸಗಿ ಜಾಗದಲ್ಲಿ ರಾತ್ರೋರಾತ್ರಿ ಕಡತ ನಾಶ ಮಾಡಿದ್ದು, ಭಾರೀ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net