ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಡಯಾಲಿಸಿಸ್ ಸೇವೆ

oplus_2
oplus_2
Published on

ಚಿತ್ರದುರ್ಗ: ಜಾಗತಿಕ ಜನಸಂಖ್ಯೆ ಶೇ.10 ಜನರ ಮೇಲೆ ಮೂತ್ರಪಿಂಡದ ಕಾಯಿಲೆ ದುಷ್ಪರಿಣಾಮಬೀರಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ವಿಶ್ವ ಕಿಡ್ನಿ ದಿನದ ಅಂಗವಾಗಿ ನಗರದ ಪದ್ಮಾವತಿ ನರ್ಸಿಂಗ್ ಸೈನ್ಸ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಮಾಹಿತಿ,ಶಿಕ್ಷಣ,ಸಂವಹನ ಕಾರ‌್ಯಕ್ರಮ ದಲ್ಲಿ ಮಾತನಾಡಿ,850 ಮಿಲಿಯನ್‌ಗಿಂತಲೂ ಅಧಿಕ ಜನರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಮೂತ್ರಪಿಂಡದ ಕಾಯಿಲೆ ಸಾವಿಗೆ 5ನೇ ಪ್ರಮುಖ ಕಾರಣವಾಗಲಿದೆ.

ವಿಶ್ವ ಕಿಡ್ನಿ ದಿನವೂ ಮೂತ್ರಪಿಂಡದ ಆರೋಗ್ಯದ ಮಹತ್ವದ ಮೇಲೆ ಕೇಂದ್ರೀಕರಿಸಲು,ಜಾಗೃತಿ ಮೂಡಿಸಲು ನೆರವಾಗಿದೆ.ಡಯಾಲಿಸಿಸ್,ಕಿಡ್ನಿ ಕಸಿ ಸೇರಿದಂತೆ ಇತರೆ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳೆಡೆ ಅರಿವು ಮೂಡಿಸುತ್ತಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಹಿಮೋ ಡಯಾಲಿಸಿಸ್ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ,ಮೂತ್ರಪಿಂಡದ ಆರೋಗ್ಯದೆಡೆ ಜಾಗೃತಿ ಅಗತ್ಯ ಹಾಗೂ ಸಂಭಾವ್ಯ ವೈದ್ಯಕೀಯ ವೆಚ್ಚದ ಕುರಿತು ಬಜೆಟ್‌ನ್ನು ರೂಪಿಸಿಕೊಳ್ಳುವುದು ಮುಖ್ಯವಾಗಿದೆ. ಪ್ರತಿಯೊಬ್ಬರಿಗೂ ಎರಡು ಮೂತ್ರಪಿಂಡಗಳಿರುತ್ತವೆ.ಅವಶ್ಯವಿರುವ ಸಂ ಬಂಧಿಗಳಿಗೆ ಅಥವಾ ಮೂತ್ರ ಪಿಂಡ ವೈಫಲ್ಯತೆ ಇರುವವರಿಗೆ ಒಂದನ್ನು ದಾನ ಮಾಡಬಹುದಾಗಿದೆ ಎಂದರು. ಹಿರಿಯ ಆರೋಗ್ಯ ನಿರೀಕ್ಷ ಣಾಧಿಕಾರಿ ಶ್ರೀನಿವಾಸ್ ಮತ್ತು ಆಶಾ ಬೋಧಕಿ ತಬಿತಾ ಮಾತನಾಡಿದರು.ಕಾರ‌್ಯಕ್ರಮದಲ್ಲಿ ಉಪನ್ಯಾಸಕರಾದ ಗಂಗಾ,ವೆಂಕಟೇಶ್,ವಿಜಯ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net