

ಮೈಸೂರು: ವೈದ್ಯಕೀಂು ಶಿಕ್ಷಣದಲ್ಲಿ ಪಡೆದ ಅಂಕ ಅಥವಾ ಪದವಿ ಉದ್ಯೋಗದ ವೇಳೆ ಗಣನೆಗೆ ಬರುವುದಿಲ್ಲ. ನಿಮ್ಮಲ್ಲಿರುವ ಮನೋಭಾವನೆ ಹಾಗೂ ರೋಗಿಗೆ ನೀವು ತೋರುವ ಸ್ಪಂದನೆಂುು ನಿಮ್ಮ ಬೆಳವಣಿಗೆಂು ಹಾದಿಂುನ್ನು ನಿರ್ಧರಿಸುತ್ತದೆ ಎಂದು ಆಂುುಷ್ ಇಲಾಖೆಂು ಆಂುುಕ್ತರಾದ ಡಾ.ಕೆ.ಲೀಲಾವತಿ, ವೈದ್ಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಪದವಿ ಪ್ರದಾನ ಸವಾರಂಭ ಉದ್ಘಾಟಿಸಿ ಅವರು ವಾತನಾಡಿದರು.
ಹಣ ಸಂಪಾದನೆಂೊಂದೇ ನನ್ನ ಗುರಿ ಎಂಬ ಭಾವನೆಂುುಳ್ಳವರು ವೈದ್ಯಕೀಂು ಕ್ಷೇತ್ರದ ಬದಲಾಗಿ ಬೇರೆ ಕ್ಷೇತ್ರಗಳನ್ನು ಆರಿಸಿಕೊಳ್ಳುವುದು ಒಳಿತು. ಸದೃಢ ಸಮಾಜ ರೂಪುಗೊಳ್ಳಬೇಕಾದರೆ ಶಿಕ್ಷಣ ಹಾಗೂ ವೈದ್ಯಕೀಂು ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಕಾಂರ್ುನಿರ್ವಹಿಸುವಾಗ ಅದನ್ನು ಉದ್ಯೋಗವೆಂದು ಬಿಂಬಿಸದೆ ಜನರ ಸೇವೆಂಾಗಿ ಸ್ವೀಕಾರ ವಾಡಬೇಕು. ವೈದ್ಯ ಸೇವೆಗೆ ಇರುವ ಬೆಲೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ವೈದ್ಯಕೀಂು ಕ್ಷೇತ್ರ ಸುಗಮವಾಗಿದ್ದರೆ ಸವಾಜದ ಕಾಂರ್ುಗಳು ಸುಲಲಿತವಾಗಿ ಸಾಗಲು ಸಾಧ್ಯ ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂುುರ್ವೇದ ಮಹಾವಿದ್ಯಾಲಂುದ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹ ವಾತನಾಡಿ, ವೈದ್ಯಕೀಂು ಜೀವನದಲ್ಲಿ ನಡೆಂುುವ ಅನಿರೀಕ್ಷಿತ ಘಟನೆಗಳು ನಮ್ಮ ಸೋಲಿಗೂ ಕಾರಣವಾಗಬಹುದು. ಆದ್ದರಿಂದ ಧೃತಿಗೆಡದೆ ಗುರಿ ಸಾಧಿಸುವ ಛಲದೊಂದಿಗೆ ಮುಂದುವರಿಂುಬೇಕು. ಹೊಸ ವಿಚಾರಗಳನ್ನು ಕಲಿಂುುವ ಆಸಕ್ತಿಂೊಂದಿಗೆ ಮುನ್ನಡೆಂುಬೇಕು ಎಂದು ಸಲಹೆ ನೀಡಿದರು.
ಪದವಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಗೋವಾದ ಜಿಎಎಂ ಮತ್ತು ಆರ್‌ಸಿ ಕಾಲೇಜಿನ ಡಾ.ಕೋರ್ಡೆ ನೀಲೇಶ್ ಪ್ರಮೋದ್, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್ ಇತರರು ಇದ್ದರು.