

ಚಿತ್ರದುರ್ಗ:ತರಬೇತಿಯಲ್ಲಿ ಪಡೆದ ಜ್ಞಾನವನ್ನು ಶಿಕ್ಷಕರು ತರಗತಿಗಳಲ್ಲಿ ಅನುಷ್ಠಾನಗೊಳಿಸಬೇಕೆಂದು ಡಿಡಿಪಿಐ ಎಂ.ಆರ್.ಮಂಜು ನಾಥ್ ಹೇಳಿದರು. ಶಿಕ್ಷಣಫೌಂಡೇಶನ್,ಮೈಕ್ರೋ ಸಾಫ್ಟ್ ರಿಸರ್ಚ್ ಇಂಡಿಯಾದಿಂದ ಡಿಡಿಪಿಐ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಆಯ್ದ ಶಿಕ್ಷಕರಿಗೆ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಆಧಾರಿತ ಶಿಕ್ಷಕೋ ಫೈಲೆಟ್ ತರಬೇತಿ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿ,ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಶಿಕ್ಷಕರ ಸಾಮರ್ಥ್ಯ ಹೆಚ್ಚಳಕ್ಕಾಗಿ ತಂತ್ರಜ್ಞಾನ ಬಳಕೆ ಕುರಿತು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂ ದರು. ಡಿವೈಪಿಸಿ ವೆಂಕಟೇಶಪ್ಪ,ಎಪಿಸಿ ಮಂಜುನಾಥ್, ಕುಸುಮಾ,ರಾಜೀವ್,ತಾಂತ್ರಿಕ ಸಹಾಯಕ ಲಿಂಗರಾಜು, ಶಿಕ್ಷಣ ಫೌಂಡೇಶನ್‌ನ ಸಿಇಒ ಪ್ರಸನ್ನಒಡೆಯರ್, ಕಾರ‌್ಯಾಕ್ರಮಾಧಿಕಾರಿ ಸ್ಮಿತಾ,ಶಂಭುಲಿಂಗ ನಡುವಿನಮನಿ,ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ್,ಮಹೇಶ್ ಇ ದ್ದರು.