

ರಾಯಚೂರು: ಸಾವಿತ್ರಿಬಾಯಿ ುಲೆ ಜನ್ಮದಿನವಾದ ಜ.3ರಂದು ರಾಜ್ಯಾದ್ಯಂತ ಶಿಕ್ಷಕಿಯರ ದಿನಾಚರಣೆ ಆಚರಿಸಲು ಸರ್ಕಾರದಿಂದ ಆದೇಶ ಹೊರಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸಾವಿತ್ರಿಬಾಯಿ ುಲೆ ಶಿಕ್ಷಕರ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶಿವರಾಜ ಪಾಟೀಲ್‌ಗೆ ಶನಿವಾರ ಮನವಿ ಸಲ್ಲಿಸಿ, ಪ್ರತಿವರ್ಷ ಸೆ.5ರಂದು ಶಿಕ್ಷಕರ ದಿನಾಚರಣೆ ಆಚರಿಸುವಂತೆ ಇಲಾಖೆ ವತಿಯಿಂದ ಜ.3ರಂದು ಶಿಕ್ಷಕಿಯರ ದಿನಾಚರಣೆ ಆಚರಿಸಲು ಇಲಾಖೆಯಿಂದ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಸಾವಿತ್ರಿಬಾಯಿ ುಲೆ ಪುತ್ಥಳಿ ಪ್ರತಿಷ್ಠಾಪನೆಗೆ ನಿರ್ಣಯ ಕೈಗೊಳ್ಳಲಾಗಿದ್ದು, ನಿರ್ಣಯದಂತೆ ಪುತ್ಥಳಿ ಪ್ರತಿಷ್ಠಾನೆ ಕಾರ್ಯವನ್ನು ಆರಂಭಿಸಬೇಕು. ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಟರಿ ಪ್ಯಾಡ್‌ಗಳನ್ನು ವಿತರಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಪದ್ಧತಿ ಬದಲಾವಣೆಯನ್ನು ಕೈಬಿಡಬೇಕು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರದ ಶಾಲಾ, ಕಾಲೇಜುಗಳಿಗೆ ಹೋಗಲು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು. ಸಮಯಕ್ಕೆ ಸರಿಯಾಗಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮನವಿ ಸ್ವೀಕರಿಸಿ, ಸಂಬಂಧಪಟ್ಟ ಅಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಛಾಯಾದೇವಿ ಕೋಳೂರು, ಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಶಾಂತಪ್ಪ, ತಾಲೂಕು ಅಧ್ಯಕ್ಷೆ ಧನಲಕ್ಷ್ಮಿ ಇದ್ದರು.