

ಕಲಬುರಗಿ: ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದ ಮತ್ತು ಹೈದರಾಬಾದ್ ವಿಮೋಚನೆಗೆ ಕಾರಣರಾಗಿದ್ದ ದೇಶದ ಮೊದಲ ಉಪ ಪ್ರಧಾನ ಮಂತ್ರಿ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜಯಂತ್ಯುತ್ಸವವನ್ನು ರಾಜ್ಯಾದ್ಯಂತ ಸರ್ಕಾರದಿಂದಲೇ ಅಧಿಕೃತವಾಗಿ ಆಚರಿಸುವಂತೆ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ.
ಸ್ವಾತಂತ್ರ್ಯ ನಂತರ ಅವರು ಬದುಕಿದ್ದೆ ಮೂರು ವರ್ಷಗಳು. ಈ ಅವಧಿಯಲ್ಲಿ ಅವರು 30 ವರ್ಷಗಳಷ್ಟು ಸಾಧನೆ ಮಾಡಿದ್ದಾರೆ. ಇಂತಹ ಧೀಮಂತ ನಾಯಕನ ಜಯಂತ್ಯುತ್ಸವ ಸರ್ಕಾರದಿಂದ ಅಧಿಕೃತವಾಗಿ ಆಚರಿಸಲು ಕಳೆದ ವರ್ಷ ಮನವಿ ಮಾಡಲಾಗಿತ್ತು. 2020 ರಿಂದ ಈ ಜಯಂತ್ಯುತ್ಸವವನ್ನು ಅಧಿಕೃತವಾಗಿ ಆಚರಿಸುವ ಬಗ್ಗೆ ಭರವಸೆ ನೀಡಿತ್ತು. ಕರೊನಾ ಮಹಾಮಾರಿ, ಅತಿವೃಷ್ಟಿ ಮುಂತಾದ ಸಮಸ್ಯೆಗಳ ನಡುವೆ ಈ ವರ್ಷದಿಂದ ಆಚರಣೆ ಆಗಿಲ್ಲ. ಬರುವ ವರ್ಷದಿಂದಲ್ಲಾದರೂ ಪಟೇಲ್ ಜಯಂತ್ಯುತ್ಸವ ಸರ್ಕಾರದಿಂದ ಅಧಿಕೃತವಾಗಿ ಆಚರಿಸಲು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಒತ್ತಾಯಿಸುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಕಲ್ಯಾಣ ಕನರ್ಾಟಕದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆ.ಕೆ.ಆರ್.ಡಿ. ಬಿ ಅಧ್ಯಕ್ಷರು ಆಯಾ ಮಂಡಳಿಗಳ ಅಧ್ಯಕ್ಷರು, ಸಂಸದರು, ಶಾಸಕರು ಸಂಘಟಿತ ವಾಗಿ ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಸಮಿತಿ ವಿನಂತಿಸುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.