

ಚಿಕ್ಕಮಗಳೂರು: ಸರ್ಕಾರದ ಸೌಲಭ್ಯಗಳು ಸಾಮಾನ್ಯ ಬಡ ಜನರನ್ನು ತಲುಪಬೇಕೆಂಬ ಉz್ದೆÃಶದಿಂದ ಜನಸಂಪರ್ಕ ಸಭೆಯನ್ನು ಗ್ರಾಮ ಪಂಚಾ ಯಿತಿ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ತಾಲೂಕಿನ ಲಕ್ಯಾ ಹೋಬಳಿಯ ಹಿರೇಗೌಜದಲ್ಲಿ ಜಿಪಂ, ತಾಪಂ ಸಹಯೋಗದಲ್ಲಿ ಹಿರೇಗೌಜ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಜನರ ಸಮಸ್ಯೆ ಬಗೆಹರಿಸಲು ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯನ್ನು ಉದ್ಘಾ ಟಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಆದೇಶದನ್ವ ಯ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಬಡ ಜನರ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಲು ಸಹಕಾರಿಯಾಗಿದೆ. ಈ ರೀತಿಯ ವಿನೂತನ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ, ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಅಧಿಕಾರಿಗಳನ್ನು ಜನರ ಮನೆಬಾಗಿಲಿಗೆ ಕರೆದುಕೊಂಡು ಹೋಗಿ ಸಮಸ್ಯೆ ಆಲಿಸುವ ಕೆಲಸವನ್ನು ಮಾಡುತ್ತಿz್ದÉÃವೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಗೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮಗಳಲ್ಲಿ ನಾಗರೀಕರ ವಿವಿಧ ಬಗೆಯ ತೊಂದರೆಗಳನ್ನು ನಿವಾರಿಸುವ ಸಲುವಾಗಿ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಗ್ರಾಪಂಗೆ ಅಲೆಯಬಾರದೆಂಬ ದೃಷ್ಟಿಯಿಂದ ಜನಸಂಪರ್ಕ ಸಭೆಗಳನ್ನು ಏರ್ಪಡಿಸುವ ಮೂಲಕ ಬಡ ಜನರಿಗೆ ನೆರವಾಗುತ್ತಿz್ದÉÃವೆ ಎಂದು ತಿಳಿಸಿದರು.
ಜಿಲ್ಲಾಮಟ್ಟದಲ್ಲಿ ಕೃಷಿ ಇಲಾಖೆಗೆ ಸಂಬAಧಿಸಿದ ಸಮಸ್ಯೆ, ತೋಟಗಾರಿಕೆ, ಕಂದಾಯ, ಆರೋಗ್ಯ, ವಿದ್ಯುತ್, ಆಹಾರ ಇಲಾಖೆ ಸೇರಿದಂತೆ ಮುಂತಾದ ಯಾವುದೇ ಸಮಸ್ಯೆಗಳಿದ್ದರೆ ಈ ಜನಸಂಪರ್ಕ ಸಭೆಯಲ್ಲೇ ಪರಿಹರಿಸಲಾಗುವುದು ಎಂದು ಹೇಳಿದರು.
ಹಿರೇಗೌಜ ಗ್ರಾಪಂಗೆ ೧.೧೩ ಕೋಟಿ ರೂ. ಅನುದಾನವನ್ನು ನೀಡಲಾಗಿದ್ದು, ಕುರಿಚಿಕ್ಕನಹಳ್ಳಿ ರಸ್ತೆ ಅಭಿವೃ ದ್ಧಿಗೆ ೨೦ ಲಕ್ಷ ರೂ., ಚಿಕ್ಕಗೌಜ-ಹಿರೇಗೌಜ ಕಾಂಕ್ರೀಟ್ ರಸ್ತೆಗೆ ೬೦ ಲಕ್ಷ ರೂ., ಕರಿಸಿದ್ದನಹಳ್ಳಿ ರಸ್ತೆಗೆ ೧೦ ಲಕ್ಷ ರೂ., ಕೆಂಗೇನಹಳ್ಳಿ ೧೦ ಲಕ್ಷ ರೂ., ಸಾದರಹಳ್ಳಿ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ದುರಸ್ಥಿಗೆ ೨ ಲಕ್ಷ ರೂ., ಹಿರೇಗೌಜ ಗ್ರಾಮದ ಗ್ರಂಥಾಲಯ ಒಳಾಂಗಣ ನವೀಕರಣಕ್ಕೆ ೧.೫೦ ಲಕ್ಷ ರೂ., ಕಾರೇಹಳ್ಳಿ ರಸ್ತೆಗೆ ೧೦ ಲಕ್ಷ ರೂ., ವಿಎಸ್‌ಎಸ್‌ಎನ್‌ಗೆ ೩ ಲಕ್ಷ ರೂ. ಹೀಗೆ ಅನುದಾನವನ್ನು ನೀಡಲಾಗಿದೆ. ತಾಲೂಕಿನ ೩೪ ಗ್ರಾಮ ಪಂಚಾಯಿತಿಗಳ ಪೈಕಿ ಅತೀ ಹೆಚ್ಚು ಅನುದಾನ ಪಡೆದಿರುವುದು ಹಿರೇಗೌಜ ಗ್ರಾಮ ಪಂಚಾಯಿತಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಮಂಜುಳ ವಹಿಸಿದ್ದರು. ಕೃಷಿ ಉತ್ಪನ್ನಗಳ ನಿಗಮದ ಅಧ್ಯಕ್ಷ ಬಿ.ಎಚ್ ಹರೀಶ್, ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ, ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಶಿವಕುಮಾರ್, ಗುರುಮೂರ್ತಿ, ಹಾಲಪ್ಪ, ಸುರೇಶ್, ಬೀರೇಗೌಡ, ವಿಜಯ್‌ಕುಮಾರ್, ಶೋಭಾರಾಣಿ, ವಿಶಾಲಾಕ್ಷಿ, ಚಂದ್ರ ಕಲಾ, ನಾಗಣ್ಣ, ಪಿಡಿಓ ರಾಜ್‌ಕುಮಾರ್ ಮತ್ತಿತರರಿದ್ದರು.