

ರಾಮದುರ್ಗ: ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ವಕೀಲ ಎಸ್.ಪಿ.ಕರದಿನ ಹೇಳಿದರು.
ಪಟ್ಟಣದ ಸಿ.ಎಸ್.ಬೆಂಬಳಗಿ ಕಲಾ, ಶಾ.ಎಂ.ಆರ್.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿವಿಧ ಸಂಸ್ಥೆ ಹಾಗೂ ಹಾಗೂ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ ದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ನೆತಿಕ ಮೌಲ್ಯಗಳೊಂದಿಗೆ ಉನ್ನತ ಸಾಧನೆಯ ಗುರಿ ಹೊಂದಿ ಅವುಗಳ ಈಡೇರಿಕೆಗಾಗಿ ಶ್ರಮವಹಿಸಬೇಕು ಎಂದು ಕರೆ ನೀಡಿದರು. ವಕೀಲರ ಸಂದ ಅಧ್ಯ ಆರ್.ಸಿ. ಹಲ್ಯಾಳ ಮಾತನಾಡಿ, ಹೆಣ್ಣು ಮಕ್ಕಳ ರಣೆಗೆ ಅನೇಕ ಕಾನೂನು ಹಾಗೂ ವಿವಿಧ ಇಲಾಖೆಗಳ ಮುಖಾಂತರ ಸಾಕಷ್ಟು ಸೌಲಭ್ಯಗಳಿವೆ. ಸ್ತ್ರೀಯರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಹಾಯಕ ಶಿಶು ಅಭಿವದ್ಧಿ ಯೋಜನಾಧಿಕಾರಿ ಆರ್.ಮಂಜುಳಾ ಮಾತನಾಡಿ, ಹೆಣ್ಣು ಮಕ್ಕಳ ದಿನ ಆಚರಣೆಗೆ ನಿಜವಾದ ಅರ್ಥ ಬರಬೇಕಾದಲ್ಲಿ ಅವರ ಹಕ್ಕುಗಳ ರಣೆ ಹಾಗೂ ಅಭಿವದ್ಧಿಗೆ ಬಲ ತುಂಬಬೇಕಿದೆ ಎಂದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಬಿ.ಮುರಗೋಡ ಪ್ರಾಸ್ತಾವಿಕ ಮಾತನಾಡಿದರು. ಶಿಶು ಅಭಿವದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ಮುಕ್ತಾ ಜಂಬಾಳೆ, ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ. ಗೀತಾಂಜಲಿ ರಾಠೋಡ ಸ್ವಾಗತಿಸಿದರು. ಬಸವ್ವ ಬೊಮಣ್ಣನವರ ನಿರೂಪಣೆ ಮಾಡಿದರು. ಶ್ರುತಿ ಕುದರಿಮೋತಿ ವಂದಿಸಿದರು.