

ಮರಿಯಮ್ಮನಹಳ್ಳಿ: ಸವಿತಾ ಸಮುದಾಯದವರು ಸಂಘಟನೆಯಿಂದ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಪ.ಪಂ. ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ ಹೇಳಿದರು.
ಪಟ್ಟಣದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಸವಿತಾ ಸಮಾಜಕ್ಕೆ ನಿವೇಶ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಸವಿತಾ ಸಮಾಜದ ಸ್ಥಳೀಯ ಘಟಕದ ಗೌರವಾಧ್ಯಕ್ಷ ಕೆ.ನಾಗೇಶ್ ಮಾತನಾಡಿ, ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ಸಮುದಾಯಕ್ಕೆ ದಾರಿದೀಪವಾಗಿದ್ದಾರೆ. ಅತ್ಯಂತ ಶ್ರೀಮಂತ ಪರಂಪರೆ ಇರುವ ಸವಿತಾ ಸಮುದಾಯ ಒಗ್ಗಟ್ಟಾಗಿ ಇತರರಿಗೆ ಆದರ್ಶಪ್ರಾಯರಾಗಿ ಬೆಳೆಯಬೇಕು ಎಂದು ಹೇಳಿದರು.
ಅಧ್ಯಕ್ಷ ಸಿ.ಕೆ.ರಾಮುಡು ಅಧ್ಯಕ್ಷತೆ ವಹಿಸಿದರು. ಪ.ಪಂ. ಸದಸ್ಯರಾದ ಅಶ್ವಿನಿ ನಾಗರಾಜ, ಎಲ್.ವಸಂತ, ಪ್ರಮುಖರಾದ ರೋಗಾಣಿ ಮಂಜುನಾಥ, ಕೆ.ತಮ್ಮಣ್ಣ, ಶಿವಮ್ಮ, ಕೃಷ್ಣಮ್ಮ ಇತರರಿದ್ದರು.