ಸರ್ಕಾರದ ಸಾಧನೆ ತಿಳಿಸಲು ವಿಜಯ ಸಂಕಲ್ಪ

9Kagwad1A-Web
ಐನಾಪುರ ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಸುದ್ದಿಗೋಷ್ಠಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು. ಶಾಸಕರಾದ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ವಿಪ ಸದಸ್ಯರಾದ ಲಕ್ಷ್ಮಣ ಸವದಿ, ಅರುಣ ಶಹಾಪುರ, ರಾಜೇಶ ನೇರ್ಲಿ ಇದ್ದರು.
Published on

ಐನಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನತೆಗೆ ತಿಳಿಸಲು ರಾಜ್ಯದ 4 ಕಡೆಗಳಿಂದ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಪ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಐನಾಪುರ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೈಗೊಂಡ ಜನಪರ ಸಾಧನೆಗಳನ್ನು ಪರಿಚಯ ಮಾಡಿಕೊಡಲಾಗುತ್ತಿದೆ. ಮಾರ್ಚ್ 26ರಂದು ದಾವಣಗೇರಿಯಲ್ಲಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಪ್ರಧಾನ ಮಂತ್ರಿ ಮೋದಿ ಯಾತ್ರೆ ಕೊನೆಗೊಳಿಸಲಿದ್ದಾರೆ ಎಂದರು.
ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯವಿಲ್ಲ. ಹೀಗಾಗಿ 18ರ ಪೈಕಿ 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದರು. ಕೆಲಸದೊತ್ತಡದಿಂದ ಗೋಕಾಕ ಯಾತ್ರೆಗೆ ಕೆಲವರು ಗೈರಾಗಿದ್ದು, ತಪ್ಪಾಗಿ ಅಥೈಸಬೇಕಾಗಿಲ್ಲ. ಕಾಗವಾಡ ಮತಕ್ಷೇತ್ರಕ್ಕೆ ಶ್ರೀಮಂತ ಪಾಟೀಲರು ಸಾಕಷ್ಟು ಅನುದಾನ ತಂದು ಅಭಿವದ್ಧಿಗೆ ಶ್ರಮಿಸಿದ್ದಾರೆ. ಜನರು ಆಶೀರ್ವದಿಸಬೇಕು ಎಂದು ಕೇಳಿಕೊಂಡರು.

ಉತ್ತಮ ಪಾಟೀಲರನ್ನು ನಿಪ್ಪಾಣಿಯಲ್ಲಿ ಕಣಕ್ಕಿಳಿಸುವ ಪ್ರಯತ್ನಿಸುತ್ತಿಸಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ ಅವರು, ನಾನು ಕಾಂಗ್ರೆಸ ಪಕ್ಷದಲ್ಲಿದ್ದಾಗ ಕಾಕಾಸಾಬ ಪಾಟೀಲ ಹಾಗೂ ಉತ್ತಮ ಪಾಟೀಲರಿಗೆ ಹೇಳಿದ್ದನ್ನೇ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ನುಣುಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net