ಸರ್ಕಾರದ ವೈಫಲ್ಯ ತಿಳಿಸುತ್ತೇವೆ

hariprasad_
Published on

ಯಲ್ಲಾಪುರ: ರಾಜ್ಯ ಸರ್ಕಾರದ ವೈಫಲ್ಯವನ್ನು ಜನರ ಮುಂದೆ ತೆರೆದಿಡಲು ಕಾಂಗ್ರೆಸ್ ಮುಂದಾಗಿದೆ ಎಂದು ಮುಖಂಡ ಬಿ. ಕೆ. ಹರಿಪ್ರಸಾದ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರಕ್ಕೆ ತನ್ನೊಳಗಿನ ಗೊಂದಲಗಳಿಂದಾಗಿ ಕರೊನಾ ಪರಿಹಾರ ಮತ್ತು ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಕರೊನಾ ಪ್ರಕರಣಗಳು ಕಡಿವೆಗು ಇದ್ದ ಸಂದರ್ಭದಲ್ಲಿ ಸರ್ಕಾರ ಬಿಗಿಯಾದ ಲಾಕ್​ಡೌನ್ ಮಾಡಿದೆ. ಆದರೆ, ಕರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಮಯದಲ್ಲಿ ಎಲ್ಲವನ್ನೂ ಅನ್​ಲಾಕ್ ಮಾಡುತ್ತಿದೆ. ಇದು ಮುಂದಾಲೋಚನೆ ಇಲ್ಲದ ಕ್ರಮ ಎಂದು ಟೀಕಿಸಿದರು. ಪಕ್ಷಾಂತರವೆಂಬ ರಾಜಕೀಯ ಡೊಂಬರಾಟದ ಸಾಂಕ್ರಾಮಿಕ ರೋಗ ಎಲ್ಲ ಪಕ್ಷಗಳಲ್ಲೂ ಇದೆ. ಕಾಂಗ್ರೆಸ್​ನಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಯಾಗಿ, ಹೆಬ್ಬಾರ ಅವರೊಂದಿಗೆ ಬಿಜೆಪಿ ಸೇರಿದವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಉಪಾಧ್ಯಕ್ಷ ಎಸ್. ಕೆ. ಭಾಗ್ವತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಎನ್. ಗಾಂವ್ಕಾರ, ಪ್ರಮುಖರಾದ ವೇಣುಗೋಪಾಲ ಮದ್ಗುಣಿ, ಪ್ರಶಾಂತ ಸಭಾಹಿತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net