ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ

1304 KLB 08
Published on

ಕಲಬುರಗಿ: ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲು ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪ್ರತಿನಿಧಿಗಳು ನಿರ್ಧರಿಸಿದ್ದಾರೆ.
ಕೆಕೆಸಿಸಿಐ ಎಸ್.ಆರ್. ರಘೋಜಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಭೆಯಲ್ಲಿ ಕಾರ್ಯಸೂಚಿಯನ್ನು ಕಲಬುರಗಿ ಅಧ್ಯಕ್ಷ ಶಶಿಕಾಂತ ಪಾಟೀಲ್ ಪ್ರಸ್ತಾಪಿಸಿದರು.
ಬಳ್ಳಾರಿ ಸಂಸ್ಥೆ ವಿಶೇಷ ಅಹ್ವಾನಿತ ವಾಸುದೇವ ಆಸ್ತಿ ತೆರಿಗೆ ಕುರಿತು ವಿವರಿಸಿ, ಕಾಯ್ದೆ ೪೫(ಬಿ) ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ರಾಜ್ಯ ಸರ್ಕಾರಕ್ಕೆ ಆಸ್ತಿ ತೆರಿಗೆ ನಿಗದಿಪಡಿಸುವ ಅಧಿಕಾರ ಇಲ್ಲ. ಇದನ್ನು ಚುನಾಯಿತ ಸ್ಥಳೀಯ ಸಂಸ್ಥೆಗಳು ಹೊಂದಿವೆ. ಕೆಲ ವರ್ಷದಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದ್ದರಿಂದ ಸರ್ಕಾರ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆಸ್ತಿ ತೆರಿಗೆ ನಿಗದಿಪಡಿಸಲು ಸೂಚಿಸಿತ್ತು. ಆದರೆ ನೋಡಲ್ ಅಧಿಕಾರಿಗಳಿಗೆ ತೆರಿಗೆ ನಿಗದಿಪಡಿಸಲು ಬಾರದ್ದರಿಂದ ಬೇಕಾಬಿಟ್ಟಿ ಆಸ್ತಿ ತೆರಿಗೆ ವಿಧಿಸಿ ಸಾರ್ವಜನಿಕರ ಮೇಲೆ ಹೊರೆ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ ತಿದ್ದುಪಡಿ ಕುರಿತು ರಾಯಚೂರು ಸಂಸ್ಥೆ ನಿಕಟಪೂರ್ವ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ ಮಾತನಾಡಿ, ಬೆಂಗಳೂರಿನಲ್ಲಿ ಸಚಿವ ಶಿವಾನಂದ ಪಾಟೀಲ್ ಅವರನ್ನು ಭೇಟಿಯಾಗಿ ಯಾವ ಕಾರಣಕ್ಕೂ ಎಪಿಎಂಸಿ ಹೊಸ ಕಾಯ್ದೆ ಜಾರಿಗೊಳಿಸಬಾರದು. ಸಮಿತಿಯ ಸುಂಕ ೬೦ ಪೈಸೆಯಿಂದ ೩೦ ಪೈಸೆಗೆ ಇಳಿಸಬೇಕು. ಕೇವಲ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಬೇಕು ಎಂದು ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.
ವಿಜಯನಗರ ಸಂಸ್ಥೆ ಅಧ್ಯಕ್ಷ ಅಶ್ವಿನ್ ಕೋತಂಬರಿ ಮಾತನಾಡಿದರು. ವಿದ್ಯುತ್ ದರ ಏರಿಕೆ ಹಾಗೂ ಕೈಗಾರಿಕಾ ಸಮಸ್ಯೆಗಳ ಕುರಿತು ಖ್ಯಾತ ಪರಿಸರವಾದಿ ದೀಪಕ ಗಾಲಾ ಬೆಳಕು ಚೆಲ್ಲಿದರು.
ವಿವಿಧ ಜಿಲ್ಲೆಗಳ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ, ಪದಾಧಿಕಾರಿಗಳಾದ ಬಿ.ಮಹಾರುದ್ರಗೌಡ, ಎನ್. ಯಶವಂತರಾಜ, ವಿ.ರಾಮಚಂದ್ರ, ದಿನೇಶಕುಮಾರ ಜೈನ್, ವಿಷ್ಣುವ್ಯಾಸ್, ಎಸ್. ಕಮಲಕುಮಾರ, ತ್ರಿವಿಕ್ರಮ ಜೋಶಿ, ಮೈಲಾಪುರ ಮೂರ್ತಿ, ಲಕ್ಷಿö್ಮÃರೆಡ್ಡಿ, ಕೆ.ವಿ. ಮನೋಹರ, ಶೆಟ್ಟಿ ನಾಗರಾಜ, ರಾಮನುಜ ಎಂ., ಅಶ್ವಿನ್ ಕೋತಂಬರಿ, ಪ್ರಶಾಂತ ಮಾನಕರ್, ರಾಮಕೃಷ್ಣ ಬೋರಾಳಕರ್, ಚನ್ನಮಲ್ಲಿಕಾರ್ಜುನ ಅಕ್ಕಿ, ಶರಣಬಸಪ್ಪ ಪಪ್ಪಾ, ಸಿಎ ಉತ್ತಮ ಬಜಾಜ್, ನಾಗರಾಜ ನಿಗ್ಗುಡಗಿ, ಮಹಾದೇವ ಖೇಣಿ, ರವಿಚಂದ್ರ ಪಾಟೀಲ್, ಜಗದೀಶ ಕಡಗಂಚಿ, ಅಭಿಜೀತ ಪಡಶೆಟ್ಟಿ, ದಿನೇಶ ಪಾಟೀಲ್, ಉಮಾಕಾಂತ ನಿಗ್ಗುಡಗಿ, ರವೀಂದ್ರ ಮಾದಮಶೆಟ್ಟಿ, ರಾಘವೇಂದ್ರ ಮೈಲಾಪುರ, ಸಂತೋಷ ಲಂಗರ್, ಚಂದ್ರಶೇಖರ ಕೋಬಾಳ, ಶರಣಬಸಪ್ಪ ಮಚೆಟ್ಟಿ, ಹಣಮಂತರಾಯ ತೋಟ್ನಳ್ಳಿ ಭಾಗವಹಿಸಿದ್ದರು. ಕೆಕೆಸಿಸಿಐ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net