ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ

26Kush02
ಟೈಲರ್ಸ್‌ ಅಸೋಸಿಯೇಷನ್ ಕುಶಾಲನಗರ ವಲಯ ಸಮಾವೇಶವನ್ನು ಪುರಸಭೆ ಅಧ್ಯಕ್ಷ ಬಿ.ಜಯವರ್ಧನ್ ಉದ್ಘಾಟಿಸಿದರು. ಬಿ.ಎ.ನಾರಾಯಣ, ಪೈರೋಜ್ ಅಹಮದ್, ಭಾಷಾ, ವಾಸಂತಿ ಬೊಜಿ, ರೋನಾಲ್ಡೊ ಇತರರು ಹಾಜರಿದ್ದರು.
Published on

ಕುಶಾಲನಗರ: ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜಯವರ್ಧನ್ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಟೈಲರ್ಸ್‌ ಅಸೋಸಿಯೇಷನ್ ವತಿಯಿಂದ ಮಹಿಳಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಟೈಲರ್ಸ್‌ ಅಸೋಸಿಯೇಷನ್ ಕುಶಾಲನಗರ ವಲಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಬಟ್ಟೆ ಹೊಲೆದು ಜೀವನ ಸಾಗಿಸುತ್ತಿರುವ ಟೈಲರ್‌ಗಳ ಬದುಕು ಹಸನಾಗಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಬೇಕು ಎಂದರು.

ಕೆಎಸ್ಟಿಎ ಅಧ್ಯಕ್ಷ ಬಿ.ಎ.ನಾರಾಯಣ ಮಾತನಾಡಿ, ಸರ್ಕಾರ ಟೈಲರ್ಸ್‌ ಕ್ಷೇಮನಿಧಿ ಮಂಡಳಿ ರಚಿಸಬೇಕು. ಭವಿಷ್ಯನಿಧಿ, ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಕೆಎಸ್ಟಿಎ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ವಿಜಯ್, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಸಹ ಕಾರ್ಯದರ್ಶಿ ಸುಧಾಕರ್, ಕೊಡಗು ಘಟಕದ ಅಧ್ಯಕ್ಷ ಎಸ್.ಸಿ.ನಂದೀಶ್, ಗೌರವಾಧ್ಯಕ್ಷ ಶೇಕ್ ಅಹಮ್ಮದ್, ಬಿ.ಎನ್.ಮಂಜುನಾಥ್, ಕುಶಾಲನಗರ ವಲಯದ ಅಧ್ಯಕ್ಷ ಭಾಷ, ಉಪಾಧ್ಯಕ್ಷೆ ವಸಂತಿ ಬೋಜಿ, ಪ್ರಧಾನ ಕಾರ್ಯದರ್ಶಿ ಪೈರೋಜ್ ಅಹಮ್ಮದ್, ಖಜಾಂಚಿ ರೊನಾಲ್ಡೊ ಮುಖಂಡರಾದ ಆನಂದ್, ಚಂದ್ರಶೇಖರ್, ಪಿತಾಂಬರ ಗೌಡ, ಹಬೀಬಿನ್ನೀಸ, ಶಾರದಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net